Tuesday, November 26, 2024
ಹೆಚ್ಚಿನ ಸುದ್ದಿ

ಬಡ ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡುವ ಮೂಲಕ ವಿಭಿನ್ನವಾಗಿ ಅಂಬೇಡ್ಕರ್ ಜಯಂತಿ ಆಚರಣೆ-ಕಹಳೆ ನ್ಯೂಸ್

ಬಾಗೇಪಲ್ಲಿ : ತಾಲೂಕಿನ ಪಾತಪಾಳ್ಯ ಹೋಬಳಿ ನಲ್ಲಚರವು (ನಗರ್ಲು) ನಲ್ಲಿ “ನಮ್ಮ ಕರ್ನಾಟಕ ಅಹಿಂದ ಜನಪರ ವೇದಿಕೆ ವತಿಯಿಂದ ರಾಜ್ಯಾಧ್ಯಕ್ಷ ನಗರ್ಲ ನರಸಿಂಹಪ್ಪ 30 ಶಾಲಾ ವಿಧ್ಯಾರ್ಥಿಗಳಿಗೆ ಕಡು ಬಡವರಿಗೆ ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿ ಅಂಬೇಡ್ಕರ್ ಅವರ ಸೇವೆ ಅನನ್ಯವಾದುದು ಅವರು ದೇಶಕ್ಕಾಗಿ, ಹಿಂದುಳಿದ ವರ್ಗದ ಹಿತಕ್ಕಾಗಿ, ಮಹಿಳೆಯರ ಹಕ್ಕುಗಳಿಗಾಗಿ ಅವರು ನೀಡಿದ ಸಂವಿಧಾನವು ಅತ್ಯುತ್ತಮ ಶ್ರೀರಕ್ಷೆಯಾಗಿದೆ ಮತ್ತು ಇವತ್ತು ನಮ್ಮೆಲ್ಲರ ಬದುಕು ಉತ್ತಮಗೊಳ್ಳಲು ಸಹಕಾರಿಯಾಗಿದೆ.


ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬೇಡ್ಕರ್ ರವರ ಸೇವೆ ಶ್ರಮದ ಫಲ. ಇಂದು ನಾವೆಲ್ಲ ಸುಖಿಯಾಗಿದ್ದೇವೆ ಅಂತಹ ಮಾಹಾನ್ ವ್ಯಕ್ತಿಯ ಜನ್ಮದಿನಾಚರಣೆಯನ್ನು ಆತ್ಯಂತ ಅರ್ಥ ಪೂರ್ವಾಗಿ ಆಚರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ಕರ್ನಾಟಕ ಅಹಿಂದ ಜನಪರ ವೇದಿಕೆ ರಾಜ್ಯ ಯುವ ಘಟಕದ ಅದ್ಯಕ್ಷ ಹರೀಶ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಮಾಡುವುದರಿಂದ ಮಾತ್ರ ಪ್ರಗತಿ ಆಗುವುದಿಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದಾಗ ಮಾತ್ರ ಸಮಾಜದ ಏಳಿಗೆ ಮತ್ತು ಸಮಾನತೆ ಸಾಧ್ಯ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಲ್ಲಚರುವು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ.ವೆಂಕಟರಾಯಪ್ಪ ಮಾತನಾಡಿ ಸಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ‘ಸಮಾನತೆ, ಭ್ರಾತೃತ್ವ ಮನೋಭಾವವನ್ನು ನಮ್ಮ ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಸಂವಿಧಾನವೇ ನಮ್ಮೆಲ್ಲರ ಧರ್ಮವಾಗಬೇಕು ಮತ್ತು ಅದರ ಚೌಕಟ್ಟಿನಲ್ಲಿಯೇ ನಾವು ಸಾಗಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಮ್ಮ ಅಹಿಂದ ಜನಪರ ವೇದಿಕೆ ಮಹಿಳಾ ಅದ್ಯಕ್ಷೆ ನಜಿಮಾ, ಜಿಲ್ಲಾ ಯುವ ಘಟಕದ ಮುಖಂಡ ಮಹೇಶ್,ಜಿಲ್ಲಾ ರೈತ ಘಟಕದ ಮುಖಂಡ ಈರಪ್ಪ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಈಶ್ವರಪ್ಪ, ತಾಲೂಕು ಚಾಲಕರ ಘಟಕದ ಅದ್ಯಕ್ಷ ಶ್ರೀನಿವಾಸ್, ಬಾಗೇಪಲ್ಲಿ ತಾಲೂಕು ರೈತ ಘಟಕದ ಅದ್ಯಕ್ಷ ಆನಂದ ರೆಡ್ಡಿ, ಆಹಾರ ಇಲಾಖೆಯ ನರಸಿಂಹಮೂರ್ತಿ, ಜಯಚಂದ್ರ,ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ಅಬ್ದುಲ್ ಸಲಾಮ್,ಅಂಚೆ ಇಲಾಖೆ ನರೇಶ್, ಆದಿನಾರಾಯಣ ಬ್ರಹ್ಮ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.