Tuesday, November 26, 2024
ಹೆಚ್ಚಿನ ಸುದ್ದಿ

ಭೂಮಿ ಮತ್ತು ಕೈಗಾರಿಕೆಗಳು ರಾಷ್ಟ್ರೀಕರಣ ಮಾಡುವುದು ಅಂಬೇಡ್ಕರ್ ರವರ ಕನಸಾಗಿತ್ತು ; ಡಾ.ಅನಿಲ್ ಕುಮಾರ್ ಆವುಲಪ್ಪ-ಕಹಳೆ ನ್ಯೂಸ್

ಬಾಗೇಪಲ್ಲಿ : ಇಂದು ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಪಟ್ಟಣದ ಸುಂದರಯ್ಯ ಭವನದಲ್ಲಿ ಆಚರಿಸಲಾಯಿತು.


ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್ಐ ನ ಜಿಲ್ಲಾ ಸಂಚಾಲಕ ಡಾ.ಅನಿಲ್ ಕುಮಾರ್ ರವರು ಡಾ.ಅಂಬೇಡ್ಕರ್ ದೂರದೃಷ್ಟಿತ್ವದ ಮಹಾನಾಯಕ, ಅವರು ಪ್ರಜಾಪ್ರಭುತ್ವ ಭಾರತವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲು ಸಂವಿಧಾನವನ್ನು ರಚಿಸುವಲ್ಲಿ ಪ್ರಧಾನವಾದ ಪಾತ್ರ ವಹಿಸಿದರು. ಇಂತಹವರ ಬಾಲ್ಯವೂ ಹಲವಾರು ಅಹಿತಕರ ಅನುಭವಗಳ ಪಯಣವಾಗಿತ್ತು. ಎಲ್ಲವನ್ನು ಮೀರಿ ಜಗದ್ವಿಖ್ಯಾತ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ಕನಸಿನಂತೆ ದೇಶದ ಭೂಮಿ ಮತ್ತು ಕೈಗಾರಿಕೆಗಳು ರಾಷ್ಟ್ರೀಕರಣ ಆಗಿದ್ದರೆ ಬಡವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿತ್ತು. ಶ್ರಮಿಕರು, ರೈತರು ,ಕಾರ್ಮಿಕರ ಆತ್ಮಗೌರವದಿಂದ ಬದಕನ್ನು ಕಟ್ಟಿಕೊಳ್ಳುತ್ತಿದ್ದರು. ಈಗಿನ ಫ್ಯಾಸಿಸ್ಟ್ ಸರ್ಕಾರಗಳ ದೌರ್ಜನ್ಯಗಳು ನಡೆಯುತ್ತಿರಲಿಲ್ಲ. ಹಾಗಾಗಿ ರಾಷ್ಟ್ರೀಕರಣವಾದ ಸಾರ್ವಜನಿಕ ವಲಯಗಳನ್ನು ಒಂದೊಂದಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಇದರಿಂದಾಗಿ ಬಂಡವಾಳಶಾಹಿಗಳ ಗುಲಾಮರನ್ನಾಗಿಸಿ ಸಾಮಾನ್ಯ ಜನರ ಬದಕನ್ನು ಅತಂತ್ರಗೊಳಿಸಲು ಈಗಿನ ಸರ್ಕಾರಗಳು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೃಷಿ ಕೂಲಿ ಕಾರ್ಮಿಕರ ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ, ಸಿಪಿಎಂ ತಾಲೂಕು ಕಾರ್ಯದರ್ಶಿ ಮಹಮ್ಮದ್ ಅಕ್ರಂ, ಡಿ.ಹೆಚ್.ಏಸ್ ನ ಅಶ್ವಥ್ಥನಾರಾಯಣ, AIAWU ನ ಸಾವಿತ್ರಮ್ಮ, ರಾಮಚಂದ್ರ, ಗೂಳೂರು ಕೃಷ್ಣಪ್ಪ, ಚೆಂಚುರಾಯನಪಲ್ಲಿ ಕೃಷ್ಣಪ್ಪ, ಪ್ರೊ.ವೆಂಕಟಶಿವಾರೆಡ್ಡಿ, ರಘುರಾಮರೆಡ್ಡಿ, ಹರೀಶ್, ಮುನಿಚಂದ್ರಪ್ಪ ಇತರರು ಭಾಗವಹಿಸಿದ್ದರು.