Recent Posts

Sunday, January 19, 2025
ರಾಜಕೀಯ

ಸಂಜೀವ ಮಠಂದೂರು ಬದಲಾವಣೆ ಪ್ರಶ್ನೆಯೇ ಇಲ್ಲ ; ಪುತ್ತೂರಿನಲ್ಲಿ ಬಿಜೆಪಿ ಗೆಲುವು ನೂರಕ್ಕೆ ನೂರರಷ್ಟು ಖಚಿತ – ಕಹಳೆ ನ್ಯೂಸ್

ಪುತ್ತೂರು : ‘ ಸಂಜೀವ ಮಠಂದೂರು ಬದಲಾವಣೆಗೆ ಚಿಂತನೆ ನಡೆಸಿದೆ ‘ ಎಂಬ ವರದಿಯನ್ನು ನಿನ್ನೆ ಕಹಳೆ ನ್ಯೂಸ್ ಪ್ರಕಟಿಸಿತ್ತು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಯ್ಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಘದ ಪರಿವಾರ ಉನ್ನತ ಮೂಲಗಳು ಸಭೆ ನಡೆಸಿ, ಬದಲಾವಣೆ ಕುರಿತು ಚಿಂತನೆ ನಡೆಸುವಂತೆ ಬಿಜೆಪಿಗೆ ಶಿಫಾರಸ್ಸು ಮಾಡಿದ್ದರು. ಆದರೆ, ಬಿಜೆಪಿ ಉನ್ನತ ಮೂಲಗಳು ಮರು ಆಯ್ಕೆಯ ಪ್ರಶ್ನೆಯೇ ಇಲ್ಲ ಎಂದು ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಂಜೀವ ಮಠಂದೂರು ಗೆಲುವು ನೂರಕ್ಕೆ ನೂರರಷ್ಟು ಖಚಿತ, ಈ ಭಾರಿ ಬಿಜೆಪಿ :

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಭಾರಿ ಹಾಲಿ ಶಾಸಕಿ ಶಕುಂತಲಾ ಶೆಟ್ಟಿ ವಿರುದ್ಧವಾಗಿ ಸಂಜೀವ ಮಠಂದೂರು ಸಣ್ಣ ಅಂತರದಿಂದ ಸೋತಿದ್ದರು, ಆಗ ಬಿಜೆಪಿ ವಿರೂಧಿ ಅಲೆ ರಾಜ್ಯಾದ್ಯಂತ ಇತ್ತು, ಜೊತೆಗೆ ಪುತ್ತೂರಿನಲ್ಲಿ ದಿನೇಶ್ ಗೌಡ ಅವಧಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸಿದ್ದರು. ಈ ಎಲ್ಲಾ ದೃಷ್ಟಿಯಿಂದ ಬಿಜೆಪಿ ಮತ ವಿಂಗಡಣೆಯಾಗಿದೆ. ಆದರೆ, ಈ ಭಾರಿ ಹಾಗಲ್ಲ, ಟಿಕೆಟ್ ಆಕಾಂಕ್ಷಿಗಳು ಸಹಜ ಆದರೆ, ಆಕಾಂಕ್ಷಿಗಳು ಒಗ್ಗಟ್ಟಿನಲ್ಲಿದ್ದಾರೆ. ಬಿಜೆಪಿ ಗೆಲುವಿಗಾಗಿ ಕೆಲಸ ಮಾಡುತ್ತಾರೆ. ಎಲ್ಲಾ ನಾಯಕರು ಸಂಜೀವ ಮಠಂದೂರು ಗೆಲುವಿಗೆ ಶ್ರಮಿಸುತ್ತಾರೆ. ಈ ಭಾರಿ ಪುತ್ತೂರಿಗೆ ಬದಲಾವಣೆಯ ಪರ್ವ. ಬಿಜೆಪಿ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್