Saturday, November 23, 2024
ಸಿನಿಮಾ

ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದ ಹಾಗೂ ನಿರ್ಮಾಣದ  “ಜೆವಣ್” ಜಿ.ಯಸ್. ಬಿ ಕೊಂಕಣಿ ಭಾಷೆಯ ಕಾಮಿಡಿ ಚಲನಚಿತ್ರ ಮುಹೂರ್ತ

ಶ್ರೀ ಮಹಾಮಾಯಿ ಸಿನಿ ಕ್ರಿಯೇಶನ್ಸ ರವರ ಎರಡನೇ ಕಲಾಕಾಣಿಕೆ,  ಜಿ.ಎಸ್.ಬಿ.ಕೊಂಕಣಿ ಯಲ್ಲಿ ನಿರರ್ಗಳ ಹಾಸ್ಯ ಚಿತ್ರ   “ಜೆವಣ್” .

  ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದ ಹಾಗೂ ನಿರ್ಮಾಣದ  “ಜೆವಣ್” ಜಿ.ಯಸ್. ಬಿ ಕೊಂಕಣಿ ಭಾಷೆಯ ಕಾಮಿಡಿ ಚಲನಚಿತ್ರ. ಈ ಸಿನೆಮಾದ ಮುಹೂರ್ತ ಅಕ್ಷಯ ತೃತೀಯ ದಿನದಂದು ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು.
 ವಿಟ್ಲ ಮಂಗೇಶ್ ಭಟ್ ಹಾಗೂ ಪ್ರಮೋದ್ ಭಟ್ ಅಭಿನಯಿಸಿದ ಹಾಸ್ಯಮಯ ಸನ್ನಿವೇಶವನ್ನು ಮುಹೂರ್ತಕ್ಕಾಗಿ ಚಿತ್ರೀಕರಿಸಲಾಯಿತು.ವೇ.ಮೂ.ಬಿ.ವಸಂತ ಕುಮಾರ್ ಭಟ್ ಕ್ಲಾಪ್ ಮಾಡಿದರು.ದೇವಳದ ಮೊಕ್ತೇಸರ ಅರ್ಲ ಗೋವಿಂದ ಪ್ರಭು ಕ್ಯಾಮೆರಾ ಚಾಲನೆ ಮಾಡಿದರು.
 ವೇದಮೂರ್ತಿ ಸದಾಶಿವ ಭಟ್ ಮತ್ತು ವೇದಮೂರ್ತಿ‌ ಸದಾನಂದ ಭಟ್ ರವರು ಶುಭಾಶೀರ್ವಾದಗೈದರು.
ಜೆವಣ್  ಅಪ್ಪಟ ಸಾಂಸಾರಿಕ ಕಥೆಯೊಳಗೆ ಮಿಳಿತವಾಗಿರುವ ಭರಪೂರ ಹಾಸ್ಯದ ಅಪರೂಪದ ಚಿತ್ರ… ಈ ಹಿಂದೆ *ಅಂತು* ಹೆಸರಿನ ವಿಭಿನ್ನ ಕೊಂಕಣಿ ಚಿತ್ರ ಮಾಡಿ ಎಲ್ಲರಿಂದ ಪ್ರಶಂಸೆಗೊಳಗಾಗಿದ್ದ ಕರೋಪಾಡಿ ಅಕ್ಷಯ್ ನಾಯಕ್ ರವರು ತನ್ನ ಎರಡನೇ ಚಿತ್ರಕ್ಕೆ ವಿಭಿನ್ನ ಕಥೆಯನ್ನೇ ಆಯ್ಕೆ ಮಾಡಿದ್ದಾರೆ.
 ಅಂತುವಿಗೆ ಕೆಲಸ ಮಾಡಿದ್ದ ತಾಂತ್ರಿಕ ವರ್ಗವೆ ಈ ಚಿತ್ರಕ್ಕೂ ಇರಲಿದೆ..‌‌ ‌ಕಾಲೇಜ್ ಮುಗಿದರೂ ಕೆಲಸ ಸಿಗದೆ ಮನೆಯವರಿಗೆ ಭಾರವಾಗಿರುವ ಯುವ ಪೀಳಿಗೆಯ ಕಥೆಯನ್ನು ಆಯ್ಕೆ ಮಾಡ್ಕೊಂಡಿರೋ ಅಕ್ಷಯ್ ರವರು ಈ ಸಲವೂ ಗೆಲ್ಲುವ ಎಲ್ಲಾ ಸೂತ್ರಗಳನ್ನೂ ‘ಜೆವಣ್’ ನಲ್ಲಿ ಅಳವಡಿಸಿಕೊಂಡಿದ್ದಾರೆ.
ಚಿತ್ರಕ್ಕೆ ಕಥೆ ಚಿತ್ರಕಥೆ ಸಂಕಲನ, ನಿರ್ದೇಶನ, ಕ್ಯಾಮರಾ ಕರೋಪಾಡಿ ಅಕ್ಷಯ ನಾಯಕ್. ಪ್ರಸಾಧನ :ಪ್ರೇಮ ರಾಜ್ ಆರ್ಲಪದವು.ಸಂಭಾಷಣೆ :ಎಂ.ಕೆ.ಮಠ, ವಿ.ಎಫ್.ಎಕ್ಸ್ :ಗುರುಪ್ರಸಾದ್. ಸಂಗೀತ :ಹರಿರಾಮ್  ಅರ್.ಅರ್:  ವಿನಯ ರಂಗದೋಲ್ ಮೈಸೂರು.
ಸಹ ನಿರ್ದೇಶನ :ವಿಶ್ವನಾಥ ಕೋಡಿಕಲ್ ,ಮಿಲನ್ ಮಕುಂಜ .ಕೆಮರಾ ಸಹಾಯಕರು :ಕೃಷ್ಣ ಪ್ರಸಾದ್ ಮತ್ತು ಸಂಕೇತ್ ಕುಮಾರ್ ಇದ್ದು ನಾಯಕನಾಗಿ ಸೂರಜ್ ಭಟ್ ನಟಿಸಲಿದ್ದಾರೆ.ಶೂಟಿಂಗ್ ಸದ್ಯದಲ್ಲಿಯೇ ಬಂಟ್ವಾಳ ಸುತ್ತ ಮುತ್ತ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಕರೊಪಾಡಿ ಅಕ್ಷಯ ನಾಯಕ ತಿಳಿಸಿದರು.
 ಕಾರ್ಯಕ್ರಮದಲ್ಲಿ ಕಲಾವಿದರಾದ ವಿಟ್ಲ ಮಂಗೇಶ್ ಭಟ್,
ಸಾಹಿತಿ ಡಾ. ಅಶೋಕ ಕಾಮತ್, ಎಂ.ಸುಬ್ರಮಣ್ಯ.ಪೈ, ಮಧುಕರ ಮಲ್ಯ,ಸಾರ್ಥಕ್ ಶೆಣೈ,ಸಾಕ್ಷಿ ಶೆಣೈ, ಗೌತಮ್ ಶೆಣೈ,  ಪ್ರಮೋದ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು