ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭ ದಲ್ಲಿ ಡಾ//ಬಿ.ಆರ್.ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆ-ಕಹಳೆ ನ್ಯೂಸ್
ಕಲ್ಲಡ್ಕ : ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಅತ್ಯುತ್ತಮ ಸಂವಿಧಾನ ರಚಿಸಿ ಭಾರತದ ಹೆಸರನ್ನು ವಿಶ್ವ ಮಟ್ಟದಲ್ಲಿ ಸಾರಿದರು. ನಮ್ಮ ದೇಶದ ಅಭ್ಯುದಯಕ್ಕಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಕೊಡುಗೆ ಅಪಾರವಾದುದು ಎಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭ ದಲ್ಲಿ ನಡೆದ ಡಾ//ಬಿ.ಆರ್.ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆಯನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಶಿಕ್ಷಕ ಶ್ರೀ ನಾರಾಯಣ ಪೂಜಾರಿ ಯವರು ಮಾತನಾಡಿದರು.
ಕಾರ್ಯಕ್ರಮವನ್ನು ವೀರಕಂಭ ಗ್ರಾಮ ಪಂಚಾಯತ್ ನ ಅಧ್ಯಕ್ಷ ದಿನೇಶ್ ದೀಪ ಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸದಸ್ಯ ರಾದ ಶ್ರೀಮತಿ ಮೀನಾಕ್ಷಿ, ಜಯಪ್ರಸಾದ್, ಸಂದೀಪ್ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮೂಲ್ಯ, ಧ.ಗ್ರಾ.ಯೋ. ವೀರಕಂಬ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ನಾಯ್ಕ್, ವಿಟ್ಲ ಸಮುದಾಯ ಆರೋಗ್ಯಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರಾದ ಜ್ಯೋತಿ ಕೆ. ಎನ್, ಕೀರ್ತಿ ಎ.ಆರ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಇಂದಿರಾ ನಾಯ್ಕ್, ಕುಸುಮಾ ಮತ್ತು ವೀರಕಂಭ ಗ್ರಾಮ ವ್ಯಾಪ್ತಿಯ ಆಶಾ ಕಾಯ9ಕತೆ9ಯರು, ಹಾಗೂ ಶಿಕ್ಷಕವೃಂದ ದವರು ಭಾಗವಹಿಸದ್ದರು. ಶಿಕ್ಷಕಿ ಶಕುಂತಳಾ ಪ್ರಾರ್ಥಿಸಿ, ಶಿಕ್ಷಕಿ ಮೂಷೀ9ದಾ ಬಾನು ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು