Recent Posts

Sunday, January 19, 2025
ಸುದ್ದಿ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಸಹಭೋಜನ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಸಹಭೋಜನ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕ ಕಾಮತ್, ಡಾ. ಬಿ.ಆರ್ ಅಂಬೇಡ್ಕರ್ ಅವರು ಸಮಾನತೆಗಾಗಿ ಹೋರಾಡಿದ ಧೀಮಂತ ನಾಯಕ. ಅವರು ಅಸ್ಪೃಶ್ಯತೆಯ ವಿರುದ್ಧ ನಡೆಸಿದ ಹೋರಾಟ ನಮಗೆಲ್ಲರಿಗೂ ಆದರ್ಶ ಎಂದು ಹೇಳಿದರು. ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಸಹ ಭೋಜನ ಕಾರ್ಯಕ್ರಮ ಆಯೋಜಿಸಲಾಗಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಆಗಲೇ ಅಂಬೇಡ್ಕರ್ ಅವರು ಕಂಡ ಭಾರತ ನಿರ್ಮಾಣ ಸಾಧ್ಯ.ಸಹ ಭೋಜನ ಕಾರ್ಯಕ್ರಮವು ಸಹೋದರತೆಯ ಬಾಂಧವ್ಯವನ್ನು ಇನ್ನಷ್ಟು ಸಧೃಡಗೊಳಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪಾಲಿಕೆ ಸದಸ್ಯರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಂದ್ರ ಜಪ್ಪಿನಮೊಗರು, ರೂಪಾ ಡಿ. ಬಂಗೇರ, ಮಂಡಲ ಎಸ್.ಸಿ ಮೋರ್ಚಾ ಅದ್ಯಕ್ಷರಾದ ರಘುವೀರ್ ಬಾಬುಗುಡ್ಡೆ, ಬಿಜೆಪಿ ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ದೀಪಕ್ ಪೈ, ಕಿರಣ್ ರೈ ಬಜಾಲ್, ಅಜಯ್ ಕುಲಶೇಖರ, ರಮೇಶ್ ಹೆಗ್ಡೆ, ಸ್ರೀನಿವಾಸ್ ಶೇಟ್, ಮೋಹನ್ ಆಚಾರ್, ಲಲ್ಲೇಶ್ ಅತ್ತಾವರ, ಜನಾರ್ದನ ಕುಡ್ವ, ವಿನೋದ್ ಮೆಂಡನ್,ನಿಲೇಶ್ ಕಾಮತ್, ಅಶ್ವಿತ್ ಕೊಟ್ಟಾರಿ, ಶಿವಪ್ಪ ನಂತೂರು, ಪ್ರಜ್ವಲ್, ರವಿ ಕಾಪಿಕಾಡ್, ಗೀತಾ, ಪ್ರಸನ್ನ, ನಾಗೇಶ್, ಅರುಣ್ ವೀರನಗರ, ನವೀನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು