Recent Posts

Sunday, January 19, 2025
ಹೆಚ್ಚಿನ ಸುದ್ದಿ

ಅಂಬಿಕಾದಲ್ಲಿ ಯುಗಾದಿ ಹೊಸ ವರ್ಷಾಚರಣೆ-ಕಹಳೆ ನ್ಯೂಸ್

‘ಪ್ರಕೃತಿ ಪಲ್ಲವಿಸುವ ಹೊಸತನ ಪಸರಿಸುವ ದಿನ ಯುಗಾದಿ’. ನಾವು ಆಚರಿಸುವ ಹಬ್ಬಗಳಲ್ಲಿ ಆರೋಗ್ಯ, ವಿಜ್ಞಾನ, ಪರಿಸರ ಪ್ರಜ್ಞೆ, ಸಂಸ್ಕೃತಿ ಭಾರತೀಯತೆ ಅಡಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ವಿಚಾರಗಳನ್ನು ಗೌರವಿಸೋಣ , ಪಾಲಿಸೋಣ ಎಂದು ಅಂಬಿಕಾದಲ್ಲಿ ಸಂಭ್ರಮದ ಯುಗಾದಿ ಆಚರಣೆಯ ಸಮಾರಂಭದಲ್ಲಿ ಮುಖ್ಯ ಅಥಿತಿ, ವಾಗ್ಮಿ ಆದರ್ಶ ಗೋಖಲೆಯವರು ದೇಶದ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಮಾತುಗಳನ್ನು ಆಡಿದರು. ಅಂಬಿಕಾದ ವಿದ್ಯಾರ್ಥಿಗಳು ಎಲ್ಲರಿಗೂ ಪ್ರೇರಣೆಯಾಗಿ ಹೊಸ ವಿಶ್ವಾಸ ಭರವಸೆಯಿಂದ ಒಳ್ಳೆಯ ಕೆಲಸ ಮಾಡಿ ಎಲ್ಲರಿಗೂ ಆದರ್ಶವಾಗಿ ಎಂದು ಶುಭ ಹಾರೈಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿನಾಯಕ ಭಟ್ ಗಾಳಿಮನೆ ಇವರು ಭಾರತೀಯ ದಿನದರ್ಶಿಕೆಯನ್ನು ಪರಿಚಯಿಸಿ, ಮಹತ್ವ ತಿಳಿಸಿದರು ಹಾಗೂ ಜೀವನ ಎನ್ನುವುದು ಸಿಹಿ-ಕಹಿಗಳ ಮಿಶ್ರಣ ಎರಡನ್ನೂ ಸಮಾನವಾಗಿ ಸ್ವೀಕರಿಸುವುದು. ಇದಕ್ಕಾಗಿ ಯುಗಾದಿಯ ದಿನ ಬೇವು-ಬೆಲ್ಲ ಹಂಚುವುದು ತಿನ್ನುವುದು. ಎಲ್ಲರಿಗೂ ಬೌದ್ಧಿಕವಾಗಿ ಪ್ರಚೋದನೆ ಕೊಡುವವನು ಸೂರ್ಯ ಚಾಂದ್ರಮಾನ ಹಾಗೂ ಸೌರಮಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರನ್ನೂ ಗೌರವಿಸೋಣ ಭಾರತೀಯತೆಯನ್ನು ಮೊದಲು ಗೌರವಿಸೋಣ ಎಂದರು.

ವಿಜ್ಞಾನ ವಿದ್ಯಾರ್ಥಿಗಳು ವೈದ್ಯಕೀಯ, ತಾಂತ್ರಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಎಂದು ಶುಭ ಹಾರೈಸಿದರು.
ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಮಣ್ಯ ನಟ್ಟೋಜರು ಪ್ರಾಸ್ತಾವಿಕ ಮಾತುಗಳನ್ನಾಡಿ ನಾವೆಲ್ಲಾ ಭಾರತೀಯತೆಯನ್ನು ಉಳಿಸಿಕೊಳ್ಳೋಣ ಎಂದು ವಿಷು ಹಾಗೂ ಯುಗಾದಿಯ ಶುಭಾಶಯ ಸಾರಿದರು. ಸಭೆಯ ಅಧ್ಯಕ್ಷ ಸ್ಥಾನವನ್ನಲಂಕರಿಸಿದ ಸಂಸ್ಥೆಯ ನಿರ್ದೇಶಕರೂ ಆದ ಶ್ರೀ ಸುರೇಶ ಶೆಟ್ಟಿಯವರು ವಿದ್ಯಾಲಯಕ್ಕೆ ಈ ವರ್ಷವೂ ನೂರು ಪ್ರತಿಶತ ಫಲಿತಾಂಶ ಬರಲಿ ಎಂದು ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.
ನಟ್ಟೋಜ ಪೌಂಡೇಶನ್ ಟ್ರಸ್ಟ್‍ನ ಖಜಾಂಜಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ರಾಜಶ್ರೀ ಎಸ್ ನಟ್ಟೋಜರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲರೂ ಬೇವು-ಬೆಲ್ಲ ಸಿಹಿ ತಿಂದು ಹೊಸ ವರ್ಷ ಆಚರಿಸಿದರು. ವಿದ್ಯಾರ್ಥಿನಿ ಸ್ಮೃತಿ ಸ್ವಾಗತಿಸಿ, ಸಂಧ್ಯಾ ಪ್ರಭು ವಂದನಾರ್ಪಣೆಗೈದರು. ಕನ್ಯಾ ಸಚಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುರಳಿ ಮೋಹನ ಸಹಕರಿಸಿದರು.