ಬಳ್ಳಾರಿ : ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂದಿನ ತಿಂಗಳು ಮೇ 15 ವರೆಗೆ ಹಂಪಿಯ ಸ್ಮಾರಕಗಳ ವೀಕ್ಷಣೆಯನ್ನು ಬಂದ್ ಮಾಡಲು ಭಾರತೀಯ ಪುರಾತತ್ವ ಇಲಾಖೆ ಆದೇಶಿಸಿದೆ.
ಈ ಕುರಿತು ಇಲಾಖೆಯ ಸ್ಮಾರಕಗಳ ನಿರ್ದೇಶಕ ಎನ್.ಕೆ.ಪಾಠಕ್ ಇಂದು ಆದೇಶ ಹೊರಡಿಸಿದ್ದಾರೆ. ಹಂಪಿ ಅಷ್ಟೇ ಅಲ್ಲದೆ ದೇಶದಲ್ಲಿರುವ ಎಲ್ಲಾ ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ಸ್ಮಾರಕಗಳು ಮತ್ತು ಮ್ಯೂಸಿಯಂ ಗಳ ಪ್ರವೇಶ ಬಂದ್ ಮಾಡಲು ಆದೇಶಿಸಿದ್ದಾರೆ. ಇದರಿಂದ ಹಂಪಿಯ ವಿರೂಪಾಕ್ಷ ದೇವರಿಗೆ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆಯಲಿವೆ ಆದರೆ ಪ್ರವಾಸಿಗರ ಮತ್ತು ಭಕ್ತರ ದರ್ಶನ ಬಂದ್ ಅಗಲಿದೆ. ಅದೇ ರೀತಿ ವಿಜಯ ವಿಠಲ್ ದೇವಸ್ಥಾನ,ಕಮಲ ಮಹಲ್, ಮತ್ತು ಕಮಲಾಪುರದಲ್ಲಿನ ಮ್ಯೂಸಿಯಂ ಬರುವ ಮೇ 15 ವರೆಗೆ ವೀಕ್ಷಣೆಗೆ ಬಂದ್ ಆಗಲಿವೆ.