Sunday, January 19, 2025
ಹೆಚ್ಚಿನ ಸುದ್ದಿ

ಪುತ್ತೂರು ಮಹಾಲಿಂಗೇಶನ ಗುಣಗಾನ ಮಾಡಿದ ನಾಲ್ಕೂವರೆ ವರ್ಷದ ಜ್ಞಾನ-ಕಹಳೆ ನ್ಯೂಸ್

ಲೇಖನ : ಶುಭ್ರ.ಪುತ್ರಕಳ, ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು

ಅನೇಕರು ಮಾತನಾಡೋದನ್ನು ಕಲಿಯೋಕೆ ತುಂಬಾ ಸಮಯ ತೆಗೆದು ಕೊಳ್ಳುತ್ತಾರೆ, ಅಂತದರಲ್ಲಿ ಹಾಡನ್ನು ಕೇಳಿ ಬಾಯಿಪಾಠ ಮಾಡಿ ಹಾಡೋದಂತು ಬಹುದೂರದ ಮಾತು ಬಿಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತದರಲ್ಲಿ ಇಲ್ಲೋರ್ವೆ ಪುಟಾಣಿ ಪೋರಿ ಮೂರುವರೆ ವರ್ಷದಿಂದಲೇ ಹಾಡುವುದನ್ನು ಕಲಿತು ,ತನ್ನ ಸ್ಪಷ್ಟ ಉಚ್ಚಾರ, ಮುದ್ದು ಮಾತು, ಕಿಲಕಿಲ ನಗುವಿನಿಂದ ಹಲವರನ್ನು ಮೂಗಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಈ ಹಿಂದೆ ಕೊರಗಜ್ಜನನ್ನು ಸ್ತುತಿಸಿ ಎಲ್ಲರಿಂದಲೂ ಶಹಬಾಷ್ ಗಿರಿ ಗಿಟ್ಟಿಸಿಕೊಂಡ ಜ್ಞಾನ ಈಗ ಮಹಾಲಿಂಗೇಶನನ್ನು ವರ್ಣಿಸುವುದರ ಮೂಲಕ ಎಲ್ಲರ ಮನ ಗೆದ್ದಿದ್ದಾಳೆ.

ಪುತ್ತೂರಿನ ಮಹಾಲಿಂಗೇಶ್ವರ ದೇವರ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ಇದರ ಪ್ರಯುಕ್ತ ಈಗಾಗಲೇ ಕರ್ನಾಟಕದಾದ್ಯಂತ ಸದ್ದು ಮಾಡುತ್ತಿರುವ ಸಿ. ಆರ್ ಕ್ರಿಯೇಷನ್ ಎಂಬ, ಯು ಟ್ಯೂಬ್ ಚಾನಲ್ ನಲ್ಲಿ “ಈಶ ಮಹಾಲಿಂಗೇಶ” ಎಂಬ ಭಕ್ತಿ ಪ್ರಧಾನ ಆಲ್ಬಮ್ ಸಾಂಗ್ ನಿನ್ನೆ ತಾನೇ ಬಿಡುಗಡೆ ಹೊಂದಿದೆ.
ಮಲೆನಾಡಿನ ಹೆಣ್ಣು ಖ್ಯಾತಿಯ ಚರಣ್ ಉಪ್ಪಳಿಗೆ ಅವರ ಸಾರಥ್ಯದಲ್ಲಿ, ಶುಭ್ರ. ಪುತ್ರಕಳ ಇವರ ಸಾಹಿತ್ಯದಲ್ಲಿ, ಸರಿಗಮಪ ಖ್ಯಾತಿಯ ಜ್ಞಾನ. ಗುರುರಾಜ್ ಇವರ ಕಂಠದಲ್ಲಿ ಮೂಡಿಬಂದ ಈ ಹಾಡನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಬಿಡುಗಡೆ ಮಾಡಿದ್ದು, ಬಿಡುಗಡೆ ಆದ 2 ಗಂಟೆಗಳಲ್ಲಿ 2 ಸಾವಿರ ವೀಕ್ಷಣೆಯನ್ನು ಪಡೆದಿದ್ದು ಇದಾಗಲೇ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.