Recent Posts

Sunday, April 13, 2025
ಉಡುಪಿ

ಉಡುಪಿಯ ಪ್ರಖ್ಯಾತ ನೋವೆಲ್ಟಿ ಜ್ಯುವೆಲ್ಲರಿ ಮಾಲೀಕ ಜಿ. ಜಯ ಆಚಾರ್ಯ ಅವರಿಗೆ ಆಭರಣ ತಯಾರಿಸಿಕೊಡುವ ನೆಪದಲ್ಲಿ ವಂಚನೆ ; ದೂರು ದಾಖಲು-ಕಹಳೆ ನ್ಯೂಸ್

ಉಡುಪಿ : ಉಡುಪಿಯ ಪ್ರಖ್ಯಾತ ನೋವೆಲ್ಟಿ ಜ್ಯುವೆಲ್ಲರಿ ಮಾಲೀಕ ಜಿ. ಜಯ ಆಚಾರ್ಯ ಅವರಿಗೆ ಆಭರಣ ತಯಾರಿಸಿಕೊಡುವ ನೆಪದಲ್ಲಿ ವ್ಯಕ್ತಿಯೋರ್ವ 4 ಲಕ್ಷ ವಂಚಿಸಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿನ್ನದ ಕರಿಮಣಿ ತಯಾರಿಸಿ ಕೊಡುವುದಾಗಿ ಹೇಳಿ, ಜಯ ಆಚಾರ್ಯ ಅವರಿಗೆ ಪರಿಚಯಸ್ಥ ಮಂಜುನಾಥ ಆಚಾರ್ಯ ಎಂಬಾತ ಫೆ.13 ರಂದು 92.970 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗಿದ್ದು, ಬಳಿಕ ಅಭರಣವಾಗಲಿ ಅಥವಾ ಚಿನ್ನದ ಗಟ್ಟಿಯಾಗಲಿ ಹಿಂತಿರುಗಿಸದೆ ವಂಚನೆ ಎಸಗಿದ್ದಾನೆ. ಈ ಬಗ್ಗೆ ಜ್ಯುವೆಲ್ಲರಿ ಮಾಲೀಕ ಚಿನ್ನದ ಮೌಲ್ಯ 4 ಲಕ್ಷ ಚಿನ್ನ ಹಿಂತಿರುಗಿಸದೆ ವಂಚನೆ ಎಸಗಿದ್ದಾರೆಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಪರಾಧ ಕ್ರಮಾಂಕ 66/2021ಕಲಂ:420, 406 ಐಪಿಸಿಯಂತೆ ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ