Sunday, January 26, 2025
ಬಂಟ್ವಾಳ

ಎಪ್ರಿಲ್ 17ರಂದು ಬಿ.ಸಿ.ರೋಡಿನಲ್ಲಿ ದ.ಕ. ಜಿಲ್ಲಾ ಮಟ್ಟದ ‘ಜಾಗರಣ ಟ್ರೋಫಿ’ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ-ಕಹಳೆ ನ್ಯೂಸ್

ಬಂಟ್ವಾಳ : ಹಿಂದು ಜಾಗರಣ ವೇದಿಕೆ, ಹಿಂದು ಯುವವಾಹಿನಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಜಾಗರಣ ಟ್ರೋಫಿ – 2021’ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಎಪ್ರಿಲ್ 17ರಂದು ಬಿ.ಸಿ.ರೋಡ್ ಗಾಣದಪಡ್ಪು ಮೈದಾನದಲ್ಲಿ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ತಿಳಿಸಿದರು.


ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವಕ್ಕಾಗಿ ಕ್ರೀಡೆ ಧ್ಯೇಯದೊಂದಿಗೆ ನಡೆಯುವ ಈ ಕಬಡ್ಡಿ ಕ್ರೀಡಾ ಕೂಟ ಎಪ್ರಿಲ್ 17ರಂದು ರಾತ್ರಿ 8:30ಕ್ಕೆ ಉದ್ಘಾಟನೆಗೊಳ್ಳಲಿದೆ. ಸುಮಾರು 50ರಿಂದ 60 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ತಂಡ ನೋಂದಾಯಿಸಲು ಎಪ್ರಿಲ್ 16 ಕೊನೆಯ ದಿನವಾಗಿದ್ದು ಹಿಂದು ಬಾಂಧವರಿಗೆ ಮಾತ್ರ ಆಡಲು ಅವಕಾಶ. ಪ್ರವೇಶ ಶುಲ್ಕ 500 ರೂ. ಆಗಿದ್ದು, ಪ್ರಥಮ 11,111 ರೂ. ನಗದು ಮತ್ತು ಜಾಗರಣ ಟ್ರೋಫಿ, ದ್ವಿತೀಯ 8,888 ರೂ. ನಗದು ಮತ್ತು ಜಾಗರಣ ಟ್ರೋಫಿ, ತೃತೀಯ 5,555 ರೂ. ನಗದು ಮತ್ತು ಜಾಗರಣ ಟ್ರೋಫಿ, ಚತುರ್ಥ 3,333 ರೂ. ನಗದು ಮತ್ತು ಜಾಗರಣ ಟ್ರೋಫಿ ಹಾಗೂ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಸವ್ಯಸಾಚಿ ಪ್ರಶಸ್ತಿ ನೀಡಲಾಗುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ.ಉಲ್ಲಾಸ್ ಉದ್ಘಾಟಿಸಲಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯ ಹಲವು ನಾಯಕರು, ಉದ್ಯಮಿಗಳು, ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಅದೇ ದಿನ ಸಂಜೆ 7:30ರಿಂದ ಸಪ್ತಸ್ವರ ಮೆಲೋಡಿಸ್ ವಾಮದಪದವು ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಹಿಂಜಾವೇ ಪುತ್ತೂರು ಜಿಲ್ಲಾ ಅಧ್ಯಕ್ಷ ಜಗದೀಶ್ ನೆತ್ತರಕೆರೆ, ಹಿಂದು ಯುವಾಹಿನಿ ಪುತ್ತೂರು ಜಿಲ್ಲಾ ಸಂಯೋಜಕ ಪ್ರಶಾಂತ್ ಕೆಂಪುಗುಡ್ಡೆ, ಹಿಂಜಾವೇ ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ ಬೆಳ್ಳೂರು, ಪ್ರಧಾನ ಕಾರ್ಯದರ್ಶಿ ಯೋಗೀಶ್ ತುಂಬೆ, ಹಿಂದೂ ಯುವವಾಹಿನಿ ತಾಲೂಕು ಸಹಸಂಯೋಜಕ ತಿಲಕ್ ಅಮ್ಟಾಡಿ ಉಪಸ್ಥಿತರಿದ್ದರು.