Friday, January 24, 2025
ಪುತ್ತೂರು

ಪುತ್ತೂರು ಜಾತ್ರೋತ್ಸವದ ಸಂದರ್ಭದಲ್ಲಿ ಎ .16 ಮತ್ತು 17 ರಂದು ಯಾವ ರೂಟ್’ನವರಿಗೆ ಎಲ್ಲಿ ಪಾರ್ಕಿಂಗ್ ? ಇಲ್ಲಿದೆ ಮಾಹಿತಿ-ಕಹಳೆ ನ್ಯೂಸ್

ಪುತ್ತೂರು  : ಇತಿಹಾಸ ಪ್ರಸಿದ್ದ .ಪುತ್ತೂರು ಜಾತ್ರೋತ್ಸವದ ಸಂದರ್ಭ ಎ .16 ಮತ್ತು 17 ರಂದು ಪುತ್ತೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿ ಯಾವುದೇ ಸಾರ್ವಜನಿಕ ವಾಹನಗಳ ಪ್ರವೇಶಕ್ಕೆ ಹಾಗೂ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ ಎಂದು ಪುತ್ತೂರು ಸಂಚಾರಿ ಠಾಣೆ ಎಸ್ ಐ ರಾಮ್ ನಾಯ್ಕ ರವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಹನ ಪಾರ್ಕಿಂಗ್ ಗೆ ಪುತ್ತೂರು ನಗರದ ವಿವಿಧ ಭಾಗಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು ಅದರಂತೆ ನಿಗದಿ ಪಡಿಸಿದ ಸ್ಥಳಗಳಲ್ಲೇ ವಾಹನ ಪಾರ್ಕ್ ಮಾಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ . ಅದರ ಹೊರತುಪಡಿಸಿ ಬೇರೆ ಕಡೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಹಾಗೂ ಜನ ಸಂಚಾರಕ್ಕೆ ಅನಾನುಕೂಲ ವಾಗುವಂತೆ ವಾಹನ ನಿಲ್ಲಿಸಿದ್ದರೆ ಅಂತಹ ವಾಹನಗಳಿಗೆ ಲಾಕ್ ಹಾಕಿ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಹನ ಪಾರ್ಕಿಂಗ್ ಎಲ್ಲೆಲ್ಲಿ ?

ಉಪ್ಪಿನಂಗಡಿ ಮಾರ್ಗವಾಗಿ ಬರುವ ವಾಹನಗಳ ನಿಲುಗಡೆಗೆ ಪುತ್ತೂರಿನ ಎಪಿಎಂಸಿ ಯಾರ್ಡ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುಳ್ಯ ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಬರುವ ವಾಹನಗಳಿಗೆ ತೆಂಕಿಲದ ವಿವೇಕಾನಂದ ಹೈಸ್ಕೂಲ್ ಆವರಣದಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಕಿಲ್ಲೆ ಮೈದಾನದಲ್ಲಿ ಪಾರ್ಕಿಂಗ್ ಸೌಲಭ್ಯ ಮಾಡಲಾಗಿದೆ. ಅಲ್ಲದೇ, ಬಸ್ಸು ನಿಲ್ದಾಣದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದೂ ಸಾವರ್ಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದೂ ಕೊವೀಡ್ ನಿಯಾಮವಳಿ ಪಾಲಿಸಿ ಸುರಕ್ಷಿತವಾಗಿ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಮ್ ನಾಯ್ಕ ತಿಳಿಸಿದ್ದಾರೆ.