Sunday, November 24, 2024
ಪುತ್ತೂರು

4ಜನ ಅನಾರೋಗ್ಯವಂತ ಪುಟಾಣಿಗಳ ವೈದ್ಯಕೀಯ ವೆಚ್ಚಕ್ಕಾಗಿ ಸೇವಾ ಯಜ್ಞ ಎನ್ನುವ ಹೆಸರಿನಲ್ಲಿ ಹನುಮಂತನ ವೇಷ ಹಾಕಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ನಿಧಿ ಸಂಗ್ರಹ –ಕಹಳೆ ನ್ಯೂಸ್

ಪುತ್ತೂರು : ಬಂಟ್ವಾಳ ತಾಲೂಕಿನ ಕೆದಿಲ, ಕಡೇಶಿವಾಲಯ, ಪೆರ್ನೆ ಗ್ರಾಮಗಳ ಸಂಘದ (ಆರ್.ಎಸ್.ಎಸ್) ಸ್ವಯಂಸೇವಕರು, ಹಿಂದೂ ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತರು ಜೊತೆಗೂಡಿ ಗ್ರಾಮದಲ್ಲಿ ಸೇವಾ ಕಾರ್ಯಕ್ಕಾಗಿ ಕೆದಿಲದಲ್ಲಿ ಯುವಕೇಸರಿ ಗಡಿಯಾರ, ಕಡೇಶಿವಾಲಯದಲ್ಲಿ ಯುವಶಕ್ತಿ ಕಡೇಶಿವಾಲಯ, ಪೆರ್ನೆಯಲ್ಲಿ ಯುವಸ್ಪಂದನ ಪೆರ್ನೆ ಸಂಘಟನೆಗಳು ಎಲೆಮರೆಯ ಕಾಯಿಯಂತೆ ಅನೇಕ ಸೇವಾ ಕಾರ್ಯ ನಡೆಸುತ್ತಾ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಬಂಟ್ವಾಳ ತಾಲೂಕು ಮತ್ತು ಹೊರ ತಾಲೂಕುಗಳಾದ ಪುತ್ತೂರು, ಕಡಬ ತಾಲೂಕುಗಳ ನಾಲ್ಕು ಮಕ್ಕಳು ಅನಾರೋಗ್ಯದಿಂದಿದ್ದು, ಅವರಿಗೆ ಚಿಕಿತ್ಸೆ ವೆಚ್ಚ ಬರಿಸಲು ಸಾಧ್ಯವಾಗದೆ ಕಂಗೆಟ್ಟಿರುವುದನ್ನು ಮನಗಂಡ ಈ ಸಂಘಟನೆಗಳು ಸಹಾಯಹಸ್ತವನ್ನು ಚಾಚಿದೆ.

ಅದಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸೇವಾ ಯಜ್ಞ ಎಂಬ ಸಂಕಲ್ಪದೊಂದಿಗೆ ಅತೀ ದೊಡ್ಡ ಅಂದಾಜು 40ಕೆಜಿ ತೂಕದ ಹನುಮಂತನ ವೇಷ ಹಾಕಿ ನಾಲ್ಕು ಮಕ್ಕಳ ಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಮುಂದಾಗಿದ್ದು,

ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.