Friday, November 22, 2024
ಸುದ್ದಿ

ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ನೇರವಾಗಿ ಖಾಸಗಿಯಾಗಿ 2018-19ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಆಟ್ರ್ಸ್ ಕಾಮರ್ಸ್ ವಿಜ್ಞಾನ ವಿಭಾಗಕ್ಕೆ ದಾಖಲಾತಿ ಆರಂಭಗೊಂಡಿದೆ – ಕಹಳೆ ನ್ಯೂಸ್

ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ಕೀರ್ತಿಯ ಶಿಖರವನ್ನೇರುತ್ತಾ ಹೊಚ್ಚ ಹೊಸ ಭರವಸೆಯೊಂದಿಗೆ 2018-19ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದೆ.

ವಿದ್ಯಾರ್ಥಿಗಳಿಗಾಗಿಯೇ ನುರಿತ ಅನುಭವಸ್ಥ ಉಪನ್ಯಾಸಕ ವೃಂದ, ಪ್ರತ್ಯೇಕವಾಗಿ ಪ್ರಶಾಂತವಾದ ವಾತಾವರಣದಲ್ಲಿ ಸುಸಜ್ಜಿತವಾದ ವಸತಿ ನಿಲಯಗಳನ್ನು ಹಾಗೂ ಶಾಲಾ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ಸೌಕರ್ಯಗಳನ್ನು ಸುವ್ಯವಸ್ಥಿತವಾದ ರೀತಿಯಲ್ಲಿ ಹೊಂದಿದೆ. ಪ್ರತೀ ವರ್ಷವು ದಾಖಲೆಯ ಫಲಿತಾಂಶ ಹೊಂದಿದ್ದು ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಪ್ರಸ್ತುತ ವರ್ಷ ಒಂದು ಹೆಜ್ಜೆ ಮುನ್ನಡೆದು ವಿಜ್ಞಾನ ವಿಭಾಗವನ್ನು ಆರಂಭಿಸುತ್ತಿದ್ದು, ದೈನಂದಿನ ತರಗತಿಗಳ ಜೊತೆಗೆ ಸಿ.ಇ.ಟಿ, ಜೆಇಇಇ ಹಾಗೂ ಎಲ್ಲಾ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಯು ಹತ್ತನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು 15 ವಯಸ್ಸನ್ನು ಪೂರ್ಣಗೊಳಿಸಿರಬೇಕು. ಹಾಗೆಯೇ ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸಿ ದ್ವಿತೀಯ ಪಿ.ಯು.ಸಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಳಿಸುವುದು, ಇತರರಂತೆ ಅವರನ್ನು ಸ್ಪರ್ದಾತ್ಮಕವಾಗಿ ಉತ್ತೇಜಿಸುವ ಮೂಲ ಉದ್ಧೇಶವನ್ನಿಟ್ಟುಕೊಂಡು ಓIಔS ನಿಂದ ಮಾನ್ಯತೆ ಪಡೆದುದಾಗಿದೆ. ಹಾಗೂ ಅದರಡಿಯಲ್ಲಿ ವಿದ್ಯಾಭ್ಯಾಸ ಪಡೆದವರು ಮುಂದಿನ ವಿದ್ಯಾಭ್ಯಾಸ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಅರ್ಹರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಸಕ್ತಿಯುಳ್ಳ ಮತ್ತು ಭವಿಷ್ಯದ ಸುವರ್ಣ ಕನಸನ್ನು ಕಾಣುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಂಸ್ಥೆಯ ಕಛೇರಿಯಲ್ಲಿ ಭರ್ತಿ ಮಾಡಬಹುದಾಗಿದೆ. ದಾಖಲಾತಿಗಾಗಿ ಭಾನುವಾರವು ಕಛೇರಿ ತೆರೆದಿರುತ್ತದೆ.