Friday, January 24, 2025
ಪುತ್ತೂರು

ವೃತ್ತಿಯಲ್ಲಿ ಮುಂದುವರಿಯಲು ಪೂರಕವಾಗುವ ವಿಷಯಗಳಿಗೆ ಮೊದಲ ಅದ್ಯತೆಯನ್ನಿತ್ತು ಹೊಸ ಹೊಸ ವಿಚಾರಗಳನ್ನು ಕಲಿಯುವುದು ಜಾಣ್ಮೆಯ ಲಕ್ಷಣ; ಡಾ.ಮಹೇಶ್‍ಪ್ರಸನ್ನ.ಕೆ-ಕಹಳೆ ನ್ಯೂಸ್

ಪುತ್ತೂರು : ವೃತ್ತಿಯಲ್ಲಿ ಮುಂದುವರಿಯಲು ಪೂರಕವಾಗುವ ವಿಷಯಗಳಿಗೆ ಮೊದಲ ಅದ್ಯತೆಯನ್ನಿತ್ತು ಹೊಸ ಹೊಸ ವಿಚಾರಗಳನ್ನು ಕಲಿಯುವುದು ಜಾಣ್ಮೆಯ ಲಕ್ಷಣ ಎಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಕಾಲೇಜಿನ ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅನ್ವಯ ಕೇಂದ್ರದ ಆಶ್ರಯದಲ್ಲಿ ನೂತನವಾಗಿ ಪ್ರಾರಂಭಗೊಂಡ ಡಾಕ್ಟರಲ್ ಕ್ಲಬ್‍ನ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತಾಡಿದರು. ಮಾನವನ ಮನಸ್ಸು ಸದಾ ಹೊಸತನ್ನು ಪಡೆಯಲು ಹಂಬಲಿಸುತ್ತದೆ ಅದರಂತೆ ಆ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಸಂಶೋಧನೆಗಳನ್ನು ಮಾಡುತ್ತಾ ಮುನ್ನಡೆಯಬೇಕು ಎಂದು ನುಡಿದರು. ಸಂಶೋಧನಾ ನಿರತ ಉಪನ್ಯಾಸಕರ ಸಹಕಾರಕ್ಕಾಗಿ ಡಾಕ್ಟರಲ್ ಕ್ಲಬ್‍ನ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದ್ದು ಇದರ ಮೂಲಕ ಹಿರಿಯರ ಹಾಗೂ ವಿಧ್ವಾಂಸರ ಮಾರ್ಗದರ್ಶನ ಸಿಗುವಂತೆ ಮಾಡಲಾಗುತ್ತದೆ ಎಂದರು. ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ನೂತನ ವಿಷಯಗಳನ್ನು ಆರಿಸಿಕೊಂಡು ಜಾಗತಿಕಮಟ್ಟದಲ್ಲಿ ಮನ್ನಣೆಯನ್ನು ಗಳಿಸಿಕೊಳ್ಳುವಂತಹ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಬ್‍ನ ಸಂಚಾಲಕ ಡಾ.ಪ್ರಸಾದ್.ಎನ್.ಬಾಪಟ್ ಸಂಶೋಧನಾ ನಿರತರಿಗೆ ಇದರಿಂದಾಗುವ ಪ್ರಯೋಜನ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮ ಸಂಯೋಜಕ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ, ವಂದಿಸಿದರು. ಸಂಸೋಧನಾ ನಿರತರು ಮತ್ತು ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.