Friday, January 24, 2025
ಸುಳ್ಯ

ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಬದಿಯಲ್ಲಿ, ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಮಧ್ಯವಯಸ್ಕ ವ್ಯಕ್ತಿಯ ಮೃತದೇಹ ಪತ್ತೆ – ಕಹಳೆ ನ್ಯೂಸ್

ಸುಳ್ಯ : ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರ ಮೃತದೇಹ ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಬದಿಯಲ್ಲಿ, ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏ.16ರ ರಾತ್ರಿ 9.15 ರ ಹೊತ್ತಿಗೆ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದ ಟಾಯ್ಲೆಟ್ ಹಿಂಬದಿ ಬಿದ್ದುಕೊಂಡಿರುವುದು ಗಮನಿಸಿದ ಕೆ.ಎಸ್.ಆರ್.ಟಿ.ಸಿ.ಯ ಟಿ.ಸಿ. ಪೋಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿ, ಪೋಲೀಸರು ಬಂದು ಪರಿಶೀಲಿಸಿದಾಗ ಆ ವ್ಯಕ್ತಿ ಮೃತಪಟ್ಟಿರುವುದು ತಿಳಿದುಬಂದಿದೆ. ಹಾಗೂ ಮೃತದೇಹದ ಬಳಿ ಇದ್ದ ಬ್ಯಾಗ್ ನಲ್ಲಿ ಇದ್ದ ಆಧಾರ್ ಕಾರ್ಡ್ ನ ಆಧಾರದಲ್ಲಿ ಆ ವ್ಯಕ್ತಿ ಮಂಗಳೂರಿನ ಅಚ್ಚುತ ಎಂದು ತಿಳಿದುಬಂದಿದೆ. ಮತ್ತು ಮೃತದೇಹವನ್ನು ಪೋಲೀಸರು ಕೆ.ವಿ.ಜಿ.ಆಸ್ಪತ್ರೆಗೆ ಕೊಂಡೊಯ್ದು ಶೈತ್ಯಾಗಾರದಲ್ಲಿ ಇರಿಸಿದ್ದು, ಆ ವ್ಯಕ್ತಿಯ ಸಾವು ಹೇಗೆ ಸಂಭವಿಸಿತೆಂಬುದು ಖಚಿತ ಪಟ್ಟಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು