ಪುತ್ತೂರು ಜಾತ್ರೆ 2021 | ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮ – ಕೆರೆ ಆಯನ ” ತೆಪ್ಪೋತ್ಸವ ” ಸಂಪನ್ನ ; ಕೋವಿಡ್ ನಿಯಮಾವಳಿ ಪಾಲನೆಗೆ ಒತ್ತು ನೀಡಿದ ದೇವಾಲಯದ ಆಡಳಿತ ಮಂಡಳಿ – ಕಹಳೆ ನ್ಯೂಸ್
ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಎ.16ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಸೂಟೆಯ ಬೆಳಕಿನಲ್ಲಿ ಮಹಾಲಿಂಗೆಶ್ವರ ದೇವಸ್ಥಾನಕ್ಕೆ ಆಗಮನವಾಯಿತು.
ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯದಲ್ಲಿ ಸಾಲಾಗಿ ಭಕ್ತರು ಆರತಿ ನೆರವೇರಿಸಿದರು.
ನಂತರ ಎ.17ರ ಬ್ರಾಹ್ಮೀಮುಹೂರ್ತದಲ್ಲಿ ಕೆರೆ ಆಯನ ನಡೆಯಿತು.
ಉಳ್ಳಾಲ್ತಿ ಕಿರುವಾಳು ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪಾಲಕಿ ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ, ಕೊಂಬು, ಶಂಖ, ಭಜನೆ ಸುತ್ತು ನಡೆಯಿತು. ಬಳಿಕ ದೇವಳದ ಹೊರಾಂಗಣದಲ್ಲಿ ಹೂತೇರು, ಕೆರೆ ಆಯನ(ತೆಪ್ಪೋತ್ಸವ) ನಡೆಯಿತು. ಶ್ರೀ ದೇವರು ಕೆರೆಯ ಮಧ್ಯದಲ್ಲಿರುವ ಮಂಟಪದಲ್ಲಿ ಕುಳಿತು ಪೂಜೆ ಸ್ವೀಕರಿಸಿದ ಬಳಿಕ ದೇವಳದ ಒಳಗೆ ಹೋಗುವ ಕಾರ್ಯಕ್ರಮ ನಡೆಯಿತು.
ಕೋವಿಡ್ ನಿಯಮಾವಳಿ ಪಾಲನೆಗೆ ಮನವಿ :
ದೇವಾಲಯದ ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮಾವಳಿಗಳನ್ನು ದೇವಸ್ಥಾನದಲ್ಲಿ ಪಾಲನೆ ಮಾಡುವಂತೆ ಮಾಸ್ಕ‌್ ಕಡ್ಡಾಯವಾಗಿ ಧರಿಸುವಂತೆ ಮನವಿ ಮಾಡುದಲ್ಲದೆ, ಸ್ವಯಂ ಸೇವಕರನ್ನು ನಿಯೋಜನೆ ಮಾಡಿ ಮಾಸ್ಕ್ ಧರಿಸುಲು ಸೂಚನೆ ನೀಡಿ, ಸರಕಾರದ ಆದೇಶ ಪಾಲನೆಗೆ ಒತ್ತು ನೀಡುವುದು ಕಂಡುಬಂತು.