ಪುತ್ತೂರು ಜಾತ್ರೆ 2021 | ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಯಮುನಾ ಬೋರ್‌ವೆಲ್ಸ್ ಸಿಬಂದಿಗಳಿಂದ ಸ್ವಚ್ಛತಾ ಕಾರ್ಯ – ಕಹಳೆ ನ್ಯೂಸ್
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಏ. 17 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಏ. 16 ರಂದು ಪುತ್ತೂರಿನ ಪ್ರತಿಷ್ಠಿತ ಬೋರ್‌ವೆಲ್ ಸಂಸ್ಥೆಯಾದ ಯಮುನಾ ಬೋರ್‌ವೆಲ್ ಸಿಬಂದಿಗಳಿಂದ ರಥಬೀದಿ ಸ್ವಚ್ಛತಾ ಕಾರ್ಯ ನಡೆಯಿತು.
ಸಂಸ್ಥೆಯ ಮ್ಹಾಲಕಿ ದಿವ್ಯ ಕೃಷ್ಣ ಶೆಟ್ಟಿ ನೇತೃತ್ವವಹಿಸಿದ್ದರು. ಯಮುನಾ ಬೋರ್‌ವೆಲ್ ನ ಮ್ಹಾಲಕ ದಿ. ಕೃಷ್ಣ ಶೆಟ್ಟಿಯವರು ಪ್ರತೀವರ್ಷ ರಥಬೀದಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತನ್ನ ಸಿಬಂದಿಗಳ ಜೊತೆ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದು, ಅದೇ ಹಾದಿಯಲ್ಲಿ ಇಂದು ಅವರ ಬಳಗ ಸಾಗುತ್ತಿರುವುದು ಶ್ಲಾಘನೀಯ.
ತಂದೆ ಹಾಕಿಕೊಟ್ಟ ದಾರಿ ಅನುಸರಿಸುತ್ತಿದ್ದೇವೆ – ಕಾವ್ಯ ಕೃಷ್ಣ ಶೆಟ್ಟಿ
ಸ್ವಚ್ಚತಾ ಕಾರ್ಯದ ಬಗ್ಗೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಸಂಸ್ಥೆಯ ಮುಖ್ಯಸ್ಥೆ ದಿ. ಕೃಷ್ಣ ಶೆಟ್ಟಿಯವರ ಸುಪುತ್ರಿ ಕಾವ್ಯ ಶೆಟ್ಟಿ ತಂದೆ ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ. ಸಮಾಜಕ್ಕೆ ಉಪಕಾರಿಯಾಗಿ ಬದುಕುವುದು ನಮಗೆ ತಂದೆ ಕಲಿಸಿಕೊಟ್ಟ ಪಾಠ, ಮಹಾಲಿಂಗೇಶ್ವರ ದೇವರ ಸೇವೆ ಮಾಡುವುದು ನಮ್ಮ ಸೌಭಾಗ್ಯ ಎಂದು ಹೇಳಿದ್ದಾರೆ.