ನೆಲ್ಯಾಡಿ : ಸುಮಾರು ವರ್ಷಗಳ ಹಿಂದೆ ನೆಲ್ಯಾಡಿ ಪ್ರದೇಶಕ್ಕೆ ಆಗಮಿಸಿದ ಬೆಥನಿ ಫಾದರುಗಳು ಈ ಪ್ರದೇಶದ ಅಭಿವೃದ್ಧಿ ಬಗ್ಗೆ ಆಲೋಚಿಸಿದಾಗ ಹಲವು ಯೋಚನೆಗಳು ಹೊಳೆಯಿತು.
ಅದರಲ್ಲೂ ನೆಲ್ಯಾಡಿ ಬೆಥನಿ ವಿದ್ಯಾ ಸಂಸ್ಥೆಗಳ ಸ್ಥಾಪಕ ನಿರ್ಧೇಶಕರಾದ ರೆ|ಫಾ| ಝಕ್ಕರಿಯಾಸ್ ನಂದಿಯಾಟ್ ಅವರು ತಮ್ಮ ಆಶ್ರಮ ಜೀವನವನ್ನು ನೆಲ್ಯಾಡಿಯಲ್ಲಿ ಪ್ರಾರಂಭಿಸಿದಾಗ, ಈ ಪ್ರದೇಶದ ಅಭಿವೃದ್ಧಿ ಬಗ್ಗೆ ಕೂಲಂಕುಶವಾಗಿ ಆಲೋಚಿಸಿ ಶಿಕ್ಷಣವೇ ಸಮಾಜದ ಉನ್ನತಿಗೆ ಪರಿಹಾರ ಎಂದು ಮನಗಂಡು ಈ ಪ್ರದೇಶದಲ್ಲಿ ವಿವಿಧ ವಿದ್ಯಾ ಸಂಸ್ಥೆಗಳ ಸ್ಥಾಪಕರಾಗುವಲ್ಲಿ ಯಶಸ್ಸು ಕಂಡರು. ಅವರು ಅಂದು ಸ್ಥಾಪಿಸಿದ ಬೆಥನಿ ಐಟಿಐಯ ರಜತೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂದು ಮುಖ್ಯ ಅತಿಥಿಗಾಳಾಗಿದ್ದುಕೊಂಡು ಈ ಮಾತುಗಳಾಡಿದರು.
ಕಾರ್ಯಕ್ರಮದಲ್ಲಿ ಸ್ಥಾಪಕರೇ ಮುಖ್ಯ ಅತಿಥಿಗಳಾಗಿರುವುದು ಸಂತಸದ ವಿಷಯ. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ನಿರ್ದೇಶಕರಾದ ರೆ।ಡಾ।ಫಾ।ವರ್ಗೀಸ್ ಕೈಪನಡುಕ ಒಐಸಿ ಇವರ ನೇತೃತ್ವದಲ್ಲಿ ಬೆಥನಿ ಇಂದು ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿರುವುದು ನಿಜವಾಗಿಯೂ ಈ ಗ್ರಾಮದ ಈ ಊರಿನ ಜನರ ಭಾಗ್ಯ ಎಂದು ನೆಲ್ಯಾಡಿ ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ ಹೇಳಿದರು. ಅವರು ಮಂಗಳವಾರ ಬೆಥನಿ ಸಭಾಂಗಣದಲ್ಲಿ ನಡೆದ ಬೆಥನಿ ಐಟಿಐ ರಜತೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದರು. ಬೆಥನಿ ಐಟಿಐ ವತಿಯಿಂದ ರಜತೋತ್ಸವ ಪ್ರಯುಕ್ತ ಸುತ್ತಮುತ್ತಲಿನ ವಿವಿಧ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಿರುವ ವಿವಿಧ ಆನ್ ಲೈನ್ ಸ್ಪರ್ಧೆಗಳ ಪ್ರಮೋ ವೀಡಿಯೋವನ್ನು ನೆಲ್ಯಾಡಿ ತಾ.ಪಂ. ಸದಸ್ಯೆ ಉಷಾ ಅಂಚನ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೇತನಾ, ಪುತ್ತೂರು ಎಪಿಎಂಸಿ ನಿರ್ಧೇಶಕರಾದ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಾನಂದ ಬಂಟ್ರಿಯಾಲ್ , ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ। ಮ್ಯಾಥ್ಯೂ ಪ್ರಫುಲ್ ಒಐಸಿ, ಹಾಗೂ ಬೆಥನಿ ಸಂಸ್ಥೆಗಳ ಬರ್ಸಾರ್ ರೆ|ಫಾ। ಐಸಾಕ್ ಸ್ಯಾಮ್ ಒಐಸಿ, ಉಪಸ್ಥಿತರಿದ್ದು, ಕೊರೋ ನಾದ ಈ ವೇಳೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ರೆ।ಡಾ।ಫಾ।ವರ್ಗೀಸ್ ಕೈಪನಡುಕ ಒಐಸಿ ಇವರ ನೇತೃತ್ವದ ತಂಡ ಸುತ್ತಮುತ್ತಲಿನ ಗ್ರಾ.ಪಂ.ಗಳೊಂದಿಗೆ ಸೇರಿಕೊಂಡು ಮಾಡಿರುವ ವಿವಿಧ ಸಮಾಜಮುಖೀ ಕಾರ್ಯಕ್ರಮಗಳನ್ನು ನೆನಪಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇಪ್ಪತೈದು ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ತರಬೇತಿ ಅಧಿಕಾರಿ ಜಾನ್ ಪಿ ಎಸ್ ರವರು ಐಟಿಐ ಬೆಳೆದು ಬಂದ ಹಾದಿಯ ಸಮಗ್ರ ಚಿತ್ರಣ ನೀಡಿದರು. ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ವಂದಿಸಿದರು. ಕೋಪಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಕಿರಿಯ ತರಬೇತಿ ಅಧಿಕಾರಿ ಜ್ಯೋತಿ ಲಕ್ಷ್ಮಿ ಕೆ ಕಾರ್ಯಕ್ರಮ ನಿರೂಪಿಸಿದರು.