Saturday, November 23, 2024
ಸುದ್ದಿ

ಬೆಳ್ಳಾರೆಯಲ್ಲಿ ಗುಜರಿ ವಾಹನಗಳ ಡಂಪಿಂಗ್ ಕೇಂದ್ರವಾಗಿ ಬದಲಾದ ಅಂಬೇಡ್ಕರ್ ಭವನ-ಕಹಳೆ ನ್ಯೂಸ್

ಬೆಳ್ಳಾರೆ : ಸುಳ್ಯ ವಿಧಾನ ಸಭಾ ಕ್ಷೇತ್ರದ ಬೆಳ್ಳಾರೆ ಪೊಲೀಸ್ ಠಾಣೆ ಸಮೀಪ ಇರುವ ಅಂಬೇಡ್ಕರ್ ಭವನ ಗುಜರಿ ವಾಹನಗಳ ಡಂಪಿಂಗ್ ಕೇಂದ್ರವಾಗಿ ಬದಲಾಗಿದೆ. ಇದು ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆಯಿಂದ ಕೂಡಿರುವುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.


ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮಗಳು ನಡೆಯದೆ ವರ್ಷಗಳೇ ಕಳೆದಿದೆ. ಅತ್ತ ಕೌಂಪೌಂಡ್ ಕುಸಿದು ಬಿದ್ದರೆ ಇತ್ತ ಕಟ್ಟಡವೂ ಕುಸಿಯುವ ಹಂತದಲ್ಲಿದೆ. ಇನ್ನು ಅಂಬೇಡ್ಕರ್ ಭವನದ ಶೌಚಾಲಯ ಅತಂತ್ರ ಸ್ಥಿತಿಯಲ್ಲಿದ್ದು, ಭವನದ ಒಳಗೆ ಬಲೆಗಳು ತುಂಬಿದೆ. ಹಾಗೂ ಕಿಟಕಿಗಳು ಮುರಿದಿದ್ದು, ಕೆಲವೊಂದು ಹೆಂಚುಗಳೂ ನಾಪತ್ತೆಯಾಗಿವೆ. ಭವನದೊಳಗೆ ಬೈಕ್‍ಗಳನ್ನು ಪಾರ್ಕ್ ಮಾಡಿಲಾಗಿದೆ. ಇದನ್ನು ತೆರವುಗೊಳಿಸುವ ಕಾರ್ಯಕ್ಕೆ ಬೆಳ್ಳಾರೆ ಗ್ರಾಪಂ ಇನ್ನೂ ಮುಂದಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ತಾಲೂಕಿನಲ್ಲಿ ನಡೆದ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ, ಜಿಲ್ಲಾಧಿಕಾರಿಗಳ ಸಭೆಯಲ್ಲಿಯೂ ಈ ವಿಚಾರ ಚರ್ಚೆಯಾಗಿದ್ದರೂ ಅಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಸರಿಪಡಿಸುವ ಗೋಜಿಗೆ ಹೋಗಲೇ ಇಲ್ಲ. ಈ ಭಾಗದ ಶಾಸಕರು ಪ್ರಸ್ತುತ ಸಚಿವರೂ ಆಗಿರುವ ಎಸ್. ಅಂಗಾರರ ಕಾರ್ಯ ಕ್ಷೇತ್ರದಲ್ಲಿ ಇಂತಹದೊಂದು ಭವನ ದುಸ್ಥಿತಿಗೆ ತಲುಪಿರುವುದು ಖೇದಕರ. ಶೀಘ್ರ ಗಮನಹರಿಸಿ ಸಮಸ್ಯೆ ಬಗೆಹರಿಸುವಲ್ಲಿ ಕೈ ಜೋಡಿಸಬೇಕೆಂದು ಸ್ಥಳೀಯರದ್ದು ಮಾತಾಗಿದೆ.

ಹಾಗೆ ಸರಕಾರದ ಸುತ್ತೋಲೆ ಪ್ರಕಾರ ಹೊಸ ಕಟ್ಟಡ ನಿರ್ಮಾಣವಾಗಬೇಕಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 12 ಲಕ್ಷ ರೂ. ಮಂಜೂರುಗೊಂಡಿದ್ದು, ಜನಪ್ರತಿನಿಧಿಗಳು ಶೀಘ್ರ ಸಂದಿಸಬೇಕಾಗಿದೆ. ಮಂಜೂರಾದ ಹಣದಲ್ಲಿ ಈಗಿರುವ ಕಟ್ಟಡವನ್ನು ದುರಸ್ತಿಗೊಳಿಸಲು ಸಾಧ್ಯವಿಲ್ಲವಾಗಿದೆ.