Tuesday, January 21, 2025
ಹೆಚ್ಚಿನ ಸುದ್ದಿ

ಹವ್ಯಕ ಮಹಾಸಭೆಗೆ ISO ಪ್ರಮಾಣಪತ್ರದ ಗರಿ – ಕಹಳೆ ನ್ಯೂಸ್

ಶ್ರೀ ಅಖಿಲ ಹವ್ಯಕ ಮಹಾಸಭೆಗೆ ‘ಪಾರದರ್ಶಕ ಹಾಗೂ ಸುವ್ಯವಸ್ಥಿತ ಆಡಳಿತ ಮತ್ತು ಸಮರ್ಥ ನಿರ್ವಹಣೆಯನ್ನು ಪ್ರಾಮಾಣೀಕರಿಸುವ ಐ.ಎಸ್.ಓ ಪ್ರಮಾಣಪತ್ರ ದೊರಕಿದೆ.


ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾತಂತ್ರ್ಯ ಪೂರ್ವದಲ್ಲೇ ಸಂಸ್ಥಾಪಿತವಾಗಿ; 78 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯು ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಪ್ರಸ್ತುತ ISO ಪ್ರಮಾಣಪತ್ರ ದೊರಕಿರುವುದು ಶಿಸ್ತುಬದ್ಧ ಹಾಗೂ ಅಭಿವೃದ್ಧಿಪರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ISO 9001:2015 ಪ್ರಮಾಣ ಪತ್ರ ಸಿಕ್ಕಿದ್ದು ಹೀಗೆ :

ಹವ್ಯಕ ಮಹಾಸಭೆಯ ಆಡಳಿತ ನಿರ್ವಹಣೆ, ಸಮಾಜೋನ್ನತಿಗಾಗಿ ಕೈಗೊಂಡಿರುವ ಕಾರ್ಯಗಳು ಸೇರಿದಂತೆ ಸಮಗ್ರ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅಭ್ಯಸಿಸಿ; ತಜ್ಞರ ಪರಿಶೋಧನೆಗೆ ಒಳಪಡಿಸಲಾಗಿದ್ದು; ಎಲ್ಲಾ ವ್ಯವಸ್ಥೆಗಳು ಮತ್ತು ಆಡಳಿತ ನಿರ್ವಹಣೆಯು; ISO 9001:2015 ಅರ್ಹತಾ ನಿಯಮಗಳಿಗೆ ಅನುಗುಣವಾಗಿರುವುದು ಖಾತರಿಯಾದ ಬಳಿಕ ಹವ್ಯಕ ಮಹಾಸಭೆಗೆ ಐ.ಎಸ್.ಓ ಪ್ರಮಾಣಪತ್ರವನ್ನು ನೀಡಲಾಗಿದೆ.

ಉತ್ತಮ ಆಡಳಿತದ ಸ್ಥಿರೀಕರಣ :

ಹವ್ಯಕ ಸಮಾಜ ಶಿಸ್ತಿಗೆ ಹೆಸರುವಾಸಿಯಾಗಿದ್ದು, ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಹವ್ಯಕ ಮಹಾಸಭೆಯು ತನ್ನ ಆಡಳಿತದಲ್ಲಿ ಪಾರದರ್ಶಕತೆ – ಗುಣಮಟ್ಟ – ಸುವ್ಯವಸ್ಥಿತ ನಿರ್ವಹಣೆಯನ್ನು ಕಾಯ್ದುಕೊಂಡಿರುವುದಕ್ಕೆ ಈ ISO ಪ್ರಮಾಣಪತ್ರ ಕೈಗನ್ನಡಿಯಾಗಿದ್ದು, ಶಿಸ್ತುಬದ್ಧ ಆಡಳಿತ ಈ ಮೂಲಕವೂ ದೃಢೀಕರಣಗೊಂಡಂತಾಗಿದೆ. ಸಾಮಾಜಿಕ ಸಂಸ್ಥೆಯೊಂದಕ್ಕೆ ಅದರ ದಕ್ಷ ನಿರ್ವಹಣೆಗಾಗಿ ಈ ಪ್ರಮಾಣಪತ್ರ ಸಿಕ್ಕಿರುವುದು ವಿಶೇಷವಾಗಿದೆ.

ISO 9001:2015 ಬಗ್ಗೆ ಒಂದಿಷ್ಟು :

* ಸಂಸ್ಥೆ ಅಥವಾ ವ್ಯಕ್ತಿಗಳು ತಮ್ಮ ಹಣಕಾಸು ನಿರ್ವಹಣೆ, ಆಡಳಿತ ವ್ಯವಸ್ಥೆಯ ಗುಣಮಟ್ಟವನ್ನು ಸುಸೂತ್ರವಾಗಿ ಒಂದು ಚೌಕಟ್ಟಿನೊಳಗೆ ರೂಢಿಸಿಕೊಂಡಿರುವುದನ್ನು ಪ್ರಮಾಣೀಕರಿಸುವ ಪ್ರಮಾಣಪತ್ರ.
* ನಿತ್ಯ ವ್ಯವಹಾರಗಳನ್ನು ನಿಗದಿತ ಗುಣಮಟ್ಟದಲ್ಲಿ ಒಂದು ಚೌಕಟ್ಟಿನೊಳಗೆ ನಿರ್ವಹಿಸುವುದನ್ನು ಖಾತರಿ ಪಡಿಸುವುದು ಮತ್ತು ಅದನ್ನು ಎಲ್ಲ ರೀತಿಯಲ್ಲೂ ಸುಧಾರಿಸುವ ಕೆಲಸವನ್ನು ಹಂತ ಹಂತವಾಗಿ ನಿರಂತರವಾಗಿ ಮಾಡುವುದು.
* ಪ್ರಮಾಣೀಕರಿಸುವ ಕೆಲಸವನ್ನು ತೃತೀಯ ಸಂಸ್ಥೆಯೊಂದು ಮಾಡುವುದಾಗಿದ್ದು, ಅದು ಹಣಕಾಸು ನಿರ್ವಹಣೆ, ಆಡಳಿತ ಹಾಗೂ ಒಟ್ಟಾರೆ ವ್ಯವಸ್ಥೆಯ ಗುಣಮಟ್ಟದ ಮೌಲ್ಯಮಾಪನ ಮಾಡಿ ಬಳಿಕವಷ್ಟೇ ಪ್ರಮಾಣಪತ್ರ ಒದಗಿಸಲು ಶಿಫಾರಸು ಮಾಡುತ್ತದೆ.