Tuesday, January 21, 2025
ಹೆಚ್ಚಿನ ಸುದ್ದಿ

ಯುವ ಜನತೆಯ ಜೀವನ ಅಭದ್ರತೆಯಲ್ಲಿ ಸಾಗುತ್ತಿದೆ ; ಎಂ.ಪಿ.ಮುನಿವೆಂಕಟಪ್ಪ-ಕಹಳೆ ನ್ಯೂಸ್

ಬಾಗೇಪಲ್ಲಿ : ಪ್ರಸ್ತುತ ದೇಶದ ಯುವಜನತೆಯ ಜೀವನವು ಅಭದ್ರತೆ ಮತ್ತು ಆತಂಕಗಳ ಗೂಡಾಗಿದೆ ಎಂದು ಡಿವೈಎಫ್ಐ ನ ಮಾಜಿ ಮುಖಂಡ ಎಂ.ಪಿ ಮುನಿವೆಂಕಟಪ್ಪರವರು ಆತಂಕ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ನ ವತಿಯಿಂದ ಗೂಳೂರು ಹೋಬಳಿ ಮಟ್ಟದ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಅಧಿಕಾರದ ಗದ್ದುಗೆ ಏರಿದ ಬಿಜೆಪಿಗರು ಯುವಜನರನ್ನು ಭ್ರಮೆಗಳಲ್ಲಿ , ಕನಸುಗಳಲ್ಲಿ ಬದುಕುವಂತೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಬದಲು ಉದ್ಯೋಗಗಳ ಕಡಿತ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಿ, ಬಂಡವಾಳಶಾಹಿ ಗುಲಾಮರನ್ನಾಗಿಸುವ ತಯಾರಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಸರ್ಕಾರಗಳ ಯುವ ಜನ ವಿರೋಧಿ, ರೈತ ವಿರೋಧಿ ನಿಲುವಗಳನ್ನು ನಿರ್ದಾಕ್ಷಿಣ್ಯವಾಗಿ ಪ್ರತಿಭಟಿಸಬೇಕು. ಹಾಗಾಗಿಯೇ ಡಿವೈಎಫ್ಐ ಸದಸ್ಯರಾಗಿ ಒಗ್ಗಟ್ಟಿನ ಹೋರಾಟಗಳನ್ನು ರೂಪಿಸಬೇಕು ಎಂದರು.

ನಂತರ ಮಾತನಾಡಿದ ಡಿವೈಎಫ್ಐ ನ ಜಿಲ್ಲಾ ಸಂಚಾಲಕರಾದ ಡಾ.ಅನಿಲ್ ಕುಮಾರ್ ಆವುಲಪ್ಪರವರು, ದೇಶದಲ್ಲಿ ಆರೋಗ್ಯ, ಆಹಾರ,ಶಿಕ್ಷಣ, ವಸತಿಯಂತಹ ಮೂಲಭೂತ ಅವಶ್ಯಕಗಳನ್ನು ಪಡೆಯುವುದು ಸಂವಿಧಾನ ನಮಗೆ ನೀಡಿರುವ ಹಕ್ಕುಗಳಾಗಿವೆ. ಬ್ರಿಟಿಷರಿಂದ ಸ್ವತಂತ್ರ ಪಡೆದ ಭಾರತ ದೇಶಕ್ಕೆ ಸಾಮ್ರಾಜ್ಯಶಾಹಿ ಬಂಡವಾಳಿಗರಿಂದ ಸ್ವಾತಂತ್ರ್ಯ ಪಡೆಯಲು ಯುವಜನರು ಪ್ರತಿರೋಧ ಅವಶ್ಯಕವಿದೆ. ಗ್ರಾಮದಿಂದ ಹಿಡಿದು ತಾಲ್ಲೂಕು, ಜಿಲ್ಲೆ,ರಾಜ್ಯ, ದೇಶದ ಮಟ್ಟಕ್ಕೆ ಡಿವೈಎಫ್ಐ ನ್ನು ಸಂಘಟಿಸಬೇಕಿದೆ. ಇದಕ್ಕೆ ಗ್ರಾಮವೇ ಅಡಿಪಾಯವಾಗಿದ್ದು ಸಂಘಟನೆಯನ್ನು ಬಲಪಡಿಸಲು ಶ್ರಮಿಸಬೇಕು ಎಂದರು.

ನಂತರ ಮಾತನಾಡಿದ ಮುಖಂಡ ಹರೀಶ್ ರವರು ನಮ್ಮ ಗ್ರಾಮಗಳಲ್ಲಿ, ನಮ್ಮ ಸುತ್ತಮುತ್ತಲಿನ ಅನ್ಯಾಯ, ಅಕ್ರಮಗಳನ್ನು ತಡೆಯಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ ಯುವಜನರ ಪಾತ್ರ ಅತಿ ಮುಖ್ಯ ಎಂದರು. ಭ್ರಷ್ಟಾಚಾರ, ಕೋಮುವಾದಗಳನ್ನು ಹಿಮ್ಮೆಟ್ಟಿಸಿ ಸೌಹಾರ್ಧ ಸಮಾಜ ನಿರ್ಮಾಣಕ್ಕೆ ಬದ್ದರಾಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಘುರಾಮರೆಡ್ಡಿ, ಚಿನ್ನಾಕಾಯಲಪಲ್ಲಿ, ರಾಮಚಂದ್ರಪ್ಪ, ಮುನಿಚಂದ್ರಪ್ಪ, ವಿರೇಶ್, ವಿನೋಧ್, ನಾಗಭೂಷಣ, ಎಂ.ಎಸ್.ನಾಗರಾಜ,ನಂದಕುಮಾರ್, ಬೊಮ್ಮಯ್ಯಗಾರಪಲ್ಲಿ ರಾಮಾಂಜಿ, ಬಾಬು, ವೇಣು, ನರಸಿಂಹಮೂರ್ತಿ, ಅರುಣ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.