Wednesday, January 22, 2025
ಹೆಚ್ಚಿನ ಸುದ್ದಿ

ಕೋವಿಡ್ ಲಸಿಕೆ ಉಪ ಕೇಂದ್ರಕ್ಕೆ ಪುರಸಭೆ ಸದಸ್ಯರಿಂದ ಚಾಲನೆ-ಕಹಳೆ ನ್ಯೂಸ್

ಬಾಗೇಪಲ್ಲಿ : ಜಗತ್ತಿನಾದ್ಯಂತ ಮಹಾ ಮಾರಿ ಕರೋನ ಸೊಂಕು 2 ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ತಾಲೂಕು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪುರಸಭೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‍ನಲ್ಲಿ ಕೊವಿಡ್ ಲಸಿಕೆ ನೀಡಲು ಉಪ ಕೇಂದ್ರಗಳನ್ನು ಪ್ರಾರಂಭಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು 22 ನೇ ವಾರ್ಡ್ ಪುರಸಭೆ ಸದಸ್ಯ ಜಬೀವುಲ್ಲಾ ಖಾನ್ ಹೇಳಿದರು.


ಜಾಹೀರಾತು
ಜಾಹೀರಾತು
ಜಾಹೀರಾತು

ಬಾಗೇಪಲ್ಲಿ ಪಟ್ಟಣದ ಪುರಸಭೆ ವಾರ್ಡ್ ನಂ.22ರ ನ್ಯೂ ಹೊರೈಜನ್ ಖಾಸಗಿ ಶಾಲೆಯಲ್ಲಿ ಭಾನುವಾರ ಕೋವಿಡ್ ಲಸಿಕೆ ನೀಡುವ ಉಪ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಅದೇಶದಂತೆ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಆದರೆ, ತಾಲೂಕಿನಲ್ಲಿ ಪ್ರತಿನಿತ್ಯ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಬಾಗೇಪಲ್ಲಿ ತಾಲೂಕು ಜನಪ್ರಿಯ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಸೂಚನೆ ಮೇರೆಗೆ ಪ್ರತಿ ವಾರ್ಡ್‍ನಲ್ಲಿ ಒಂದು ದಿನ ಲಸಿಕಾ ಉಪ ಕೇಂದ್ರ ತೆರೆದು ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುರಸಭೆ ಸದಸ್ಯ ಅಶೋಕ ರೆಡ್ಡಿ ಮಾತನಾಡಿ ಕೊರೊನಾ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಕೈಜೋಡಿಸಬೇಕು ಹಾಗೂ 45 ವರ್ಷ ವಯಸ್ಸಿನ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು, ಕರೋನ ಸೊಂಕು ತಡೆಯಲು ಮಾಸ್ಕ್, ಸ್ಯಾನಿಟಿರೈಸ್, ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಈ ಸೊಂಕು ತಡೆಗಟ್ಟಬಹುದು ಎಂದು ಹೇಳಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ನಂಜುಂಡಪ್ಪ ಮಾತನಾಡಿ ಮಹಾಮಾರಿ ಕೋವಿಡ್ ತೊಲಗಿಸಲು ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆಯಬೇಕು. ಲಸಿಕೆ ಕುರಿತ ಸುಳ್ಳು ವದಂತಿ ನಂಬಬಾರದು. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಿದರು.

ಮನೆ ಮನೆಗೆ ಭೇಟಿ :

22 ನೇ ವಾರ್ಡ್ ಪುರಸಭೆ ಸದಸ್ಯರಾದ ಜಬೀವುಲ್ಲಾ ಖಾನ್ ಅವರು ಪ್ರತಿ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯುವಂತೆ ಸಾರ್ವಜನಿಕರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಎ.ಶ್ರೀನಿವಾಸ್, ಮಧುಸೂದನ್ ರೆಡ್ಡಿ, ನಿಸಾರ್ ಅಹಮದ್, ನಯಾಜ್ ಅಹಮದ್, ಮಹಮ್ಮದ್, ಮನ್ಸೂರ್, ಅಬೀದ್ ಆಲಿ, ಪುರಸಭೆ ಆರ್.ಓ.ನಾಗರಾಜ್, ಬಿ.ಎಲ್.ಓ ನಾರಾಯಣಪ್ಪ, ವೆಂಕಟೇಶ್ವರಲು, ಡಾ.ದಯಾನಂದ, ಕಲಾವತಿ, ಶಶಿಕಲಾ, ಶಾಮೀನಾ ಪಾರ್ವತಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.