Sunday, January 19, 2025
ಸಿನಿಮಾ

ಅಶ್ವಿನಿ ನಕ್ಷತ್ರ ಚೆಲುವೆ ಮಯೂರಿ ಮಾಜಿ ಸಿಎಂ ಒಬ್ಬರ ಪುತ್ರಿ – Kahale News

ಬೆಂಗಳೂರು: ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ಮಾಜಿ  ಮುಖ್ಯಮಂತ್ರಿಯೊಬ್ಬರ ಪುತ್ರಿಯಂತೆ. ಇಂಥದೊಂದು ಇಂಟರೆಸ್ಟಿಂಗ್  ಸಂಗತಿ ಈಗ ಅವರಿಂದಲೇ ಬಹಿರಂಗಗೊಂಡಿದೆ.
‘ನಾನು ಮಾಜಿ ಸಿಎಂ ಪುತ್ರಿ. ನನಗೆ ಸಿಕ್ಕಾಪಟ್ಟೆ ಷೋಕಿ. ಸದಾ ವೆಸ್ಟರ್ನ್  ಲುಕ್‌ನಲ್ಲಿ ಇರಬೇಕೆನ್ನುವ ಕ್ರೇಜ್’ ಅಂತಲೂ ಹೇಳಿಕೊಂಡಿರುವ  ಅವರು, ತಮಗೆ ತಂದೆಯಾಗಿರುವ ಆ ಮಾಜಿ ಸಿಎಂ ಯಾರು?
ಅವರು ಯಾವಾಗ ಮುಖ್ಯಮಂತ್ರಿ ಆಗಿದ್ದರು? ಈ ಪ್ರಶ್ನೆಗಳಿಗೆ ಮಾತ್ರ ಸದ್ಯಕ್ಕೆ ಅವರಿಂದ ಉತ್ತರ ಇಲ್ಲ!!

 

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಅರೆ, ಇದೇನು ವಿಧಾನಸಭೆ ಚುನಾವಣೆ ಕಾವೇರಿದ  ಹೊತ್ತಲ್ಲಿ ನಟಿ ಮಯೂರಿ ಇಂಥದೊಂದು ಬಾಂಬ್  ಸ್ಫೋಟಿಸಿದ್ದಾರೆ ಅಂತ ಅಚ್ಚರಿ ಪಡಬೇಡಿ, ಇದು  ಅವರ ರಿಯಲ್ ಲೈಫ್ ಸ್ಟೋರಿ ಅಲ್ಲ, ರೀಲ್ ಲೈಫ್  ಕತೆ. ಅಂದಹಾಗೆ, ಹೊಸಬರ ತಂಡವೊಂದು  ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರಲು ಹೊರಟಿರುವ  ‘ಸಿಗ್ನೇಚರ್’ ಹೆಸರಿನ ಚಿತ್ರಕ್ಕೆ ಮಯೂರಿ ನಾಯಕಿ  ಆಗಿದ್ದಾರೆ. ರಂಜಿತ್ ಕುಳಾಯಿ ಎಂಬ ನವ ಪ್ರತಿಭೆ ಜತೆ ಅವರು ಡ್ಯುಯೆಟ್ ಹಾಡಲು ರೆಡಿ ಆಗಿದ್ದಾರೆ.

ಈ ಚಿತ್ರದಲ್ಲಿ ಅವರು ಮಾಜಿ ಸಿಎಂ ಪುತ್ರಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆನ್ನುವುದೇ  ವಿಶೇಷ. ಚಿತ್ರೀಕರಣಕ್ಕೆ ಹೊರಟಿರುವ ಮಯೂರಿ ಮೊದಲು ಹೇಳಿದ್ದೇ  ತಾನೊಬ್ಬಳು ಮಾಜಿ ಸಿಎಂ ಪುತ್ರಿ ಅಂತ. ಅಲ್ಲಿದ್ದವರಿಗೆಲ್ಲ ಅಚ್ಚರಿ.
ಕೊನೆಗೆ ಅವರು ಹೇಳಿದ್ದು  ಚಿತ್ರದಲ್ಲಿ ನಾನು ನಿರ್ವ ಹಿಸುತ್ತಿರುವ ಪಾತ್ರವಿದು ಅಂತ.