Sunday, November 24, 2024
ಬಂಟ್ವಾಳ

ಬಿ.ಸಿ.ರೋಡು : ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ, ಹಿಂದುತ್ವ ಎಂದರೆ ರಾಷ್ಟ್ರಪ್ರೇಮದ ಸಂಕೇತ ; ರಾಧಾಕೃಷ್ಣ ಅಡ್ಯಂತಾಯ-ಕಹಳೆ ನ್ಯೂಸ್

ಬಂಟ್ವಾಳ : ಬಹು ಭಾಷೆ ಮತ್ತು ವಿವಿಧ ಧರ್ಮಗಳಿಂದ ಕೂಡಿದ ಈ ದೇಶದಲ್ಲಿ ಹಿಂದುತ್ವ ಎಂದರೆ ನೈಜ ರಾಷ್ಟ್ರಪ್ರೇಮದ ಸಂಕೇತವಾಗಿದೆ. ಆದರೆ ಲವ್ ಜಿಹಾದ್, ಮತಾಂತರ ಮತ್ತು ಗೋಹತ್ಯೆ ಮತ್ತಿತರ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.


ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಯುವವಾಹಿನಿ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟವನ್ನು ರಾಧಾಕೃಷ್ಣ ಅಡ್ಯಂತಾಯ ಮತ್ತು ಕಿಶೋರ್ ಕುಮಾರ್ ಉದ್ಘಾಟಿಸಿದರು. ಹಾಗೂ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಅಡ್ಯಂತಾಯ ಅವರು ದಿಕ್ಸೂಚಿ ಭಾಷಣ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ ಎಸ್ ಎಸ್ ಪುತ್ತೂರು ಜಿಲ್ಲೆ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯಿಂದ ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು. ಜಾಗರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಉದ್ಯಮಿ ಭುವನೇಶ ಪಚ್ಚಿನಡ್ಕ, ನಾಗೇಶ ಕಲ್ಲಡ್ಕ, ತಾರನಾಥ ಕೊಟ್ಟಾರಿ, ಉಮೇಶ ಸಾಲ್ಯಾನ್ ಬೆಂಜನಪದವು, ಪ್ರಮುಖರಾದ ರವಿರಾಜ್ ಬಿ.ಸಿ.ರೋಡು, ರತ್ನಾಕರ ಶೆಟ್ಟಿ ಕಲ್ಲಡ್ಕ, ಜಗದೀಶ ನೆತ್ರಕೆರೆ, ನರಸಿಂಹ ಶೆಟ್ಟಿ ಮಾಣಿ, ಅಜಿತ್ ಹೊಸಮನೆ, ಕಬಡ್ಡಿ ಕ್ರೀಡಾಪಟು ಪುರೋತ್ತಮ ಗಟ್ಟಿ ತುಂಬೆ, ಯುವವಾಹಿನಿ ಸಂಚಾಲಕ ಪ್ರಶಾಂತ ಕೆಂಪುಗುಡ್ಡೆ ಮತ್ತಿತರರು ಶುಭ ಹಾರೈಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದ್ರೆ, ಜಿಲ್ಲಾ ಕಾರ್ಯದರ್ಶಿ ರಾಮದಾಸ ಬಂಟ್ವಾಳ್, ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಡೊಂಬಯ ಬಿ.ಅರಳ, ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ ಸುವರ್ಣ ಮತ್ತಿತರರು ಭೇಟಿ ನೀಡಿದರು. ಜಾಗರಣ ವೇದಿಕೆ ತಾಲೂಕು ಘಟಕ ಅಧ್ಯಕ್ಷ ತಿರುಲೇಶ್ ಬೆಳ್ಳೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಚಿನ್ ಬಿ.ಸಿ.ರೋಡು ವಂದಿಸಿದರು. ಸುರೇಶ ನಾವೂರು ಕಾರ್ಯಕ್ರಮ ನಿರೂಪಿಸಿದರು.