Sunday, November 24, 2024
ಹೆಚ್ಚಿನ ಸುದ್ದಿ

ಮಾಸ್ಕ್ ಧರಿಸದವರಿಗೆ ಪೋಲಿಸರಿಂದ ದಂಡ ವಸೂಲಿ-ಕಹಳೆ ನ್ಯೂಸ್

ಬಾಗೇಪಲ್ಲಿ : ಪಟ್ಟಣದ ಕೋವಿಡ್-19 ಎರಡನೇ ಅಲೆ ವ್ಯಾಪಕವಾಗುತ್ತಿರುವುದನ್ನು ಗಮನಿಸಿ ಭಾನುವಾರ ಪೋಲಿಸ್ ಇಲಾಖೆ, ರಸ್ತೆಗಳಿಗೆ ಇಳಿದು ಸೋಂಕು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಜತೆಗೆ ಮಾಸ್ಕ್ ಧರಿಸದವರಿಗೆ 100 ರೂ ದಂಡ ವಿಧಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಟಣದ ಜನರು ಮಾಸ್ಕ್ ಧರಿಸುವುದು, ಕನಿಷ್ಠ ಅಂತರ ಕಾಪಾಡುವುದು, ಸ್ಯಾನಿಟೈಜರ್ ಬಳಸುವುದನ್ನು ಮರೆತುಬಿಟ್ಟಿದ್ದರು. ಭಾನುವಾರ ಪೋಲಿಸ್ ಅಧಿಕಾರಿಗಳು ಏಕಾಏಕಿ ರಸ್ತೆ ಇಳಿದಿರುವುದನ್ನು ಕಂಡು ಜನರು ಕಕ್ಕಾಬಿಕ್ಕಿಯಾದರು ಹಾಗೂ ಆಶ್ಚರ್ಯವನ್ನು ವ್ಯಕ್ತಪಡಿಸಿದರು.

ಒಂದು ವರ್ಷದಿಂದ ಕೊರೊನಾ ಸೋಂಕಿನಿಂದ ಸಾಕಷ್ಟು ತೊಂದರೆ ಅನುಭವಿಸಲಾಗಿದೆ. ಒಂದು ಕಡೆ ಮುಕ್ತರಾಗುತ್ತಿದ್ದೇವೆ ಎಂಬ ಹಂತಕ್ಕೆ ಬರುತ್ತಿದ್ದಂತೆ ಮತ್ತೆ ಹರಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಸೋಂಕು ಆವರಿಸಿಕೊಂಡ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ತಡೆಯುವುದು ಉತ್ತಮ. ಎಲ್ಲ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಹಕಾರ ನೀಡಬೇಕು’ ಪೋಲಿಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.