Sunday, November 24, 2024
ಹೆಚ್ಚಿನ ಸುದ್ದಿ

ಐತಿಹಾಸಿಕ ಜೈನ ಬಸದಿ ಮುಳುಗುಂದ ಗದಗದಲ್ಲಿ ಸ್ವಚ್ಛತಾ ಕಾರ್ಯಕ್ರಮ-ಕಹಳೆ ನ್ಯೂಸ್

ಧರ್ಮಸ್ಥಳ ಶ್ರೀ ಸುರೇಂದ್ರ ಹೆಗ್ಗಡೆಯವರ ನೇತೃತ್ವದ ಬೆಂಗಳೂರಿನ ಸುಹಾಸ್ತಿ ಯುವ ಜೈನ್ ಮಿಲನ್ ಹಾಗೂ ಜೈನ ಸೇವಾ ಸಂಸ್ಥೆ ಬಿಎಸ್ಎಂ ಜೈನ್ ಅಸೋಸಿಯೇಷನ್, ಮುಳುಗುಂದ ಸಾಮಾಜಿಕ ಜಾಲತಾಣ ಪೇಜ್, ಪಪಂ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಸ್ಥಳೀಯ ಪರವೂರಿನ ಎಲ್ಲಾ ಸಂಘ ಸಂಸ್ಥೆಗಳ ನೆರವಿನಿಂದ ಪುರಾಣ ಪ್ರಸಿದ್ಧ ಮುಳುಗುಂದ ಆದಿನಾಥ ಮತ್ತು ಪಾಶ್ರ್ವನಾಥ ಜಿನ ಮಂದಿರದ ಸ್ವಚ್ಛತಾ ಕಾರ್ಯಕ್ರಮವು ವಲ್ರ್ಡ್ ಹೆರಿಟೇಜ್ ದಿನಾಚರಣೆಯಂದು ನಡೆಯಿತು.


ಜಾಹೀರಾತು
ಜಾಹೀರಾತು
ಜಾಹೀರಾತು

ಐತಿಹಾಸಿಕ ಜೈನಬಸದಿಗಳು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರಬಾರದು, ಇದು ನಮ್ಮ ನಾಡಿನ ಆಸ್ತಿ, ನಮ್ಮ ಇತಿಹಾಸ ಪರಂಪರೆಯ ಕುರುಹುಗಳು ನಮ್ಮೆಲ್ಲರ ಆಸ್ತಿ ಇದನ್ನು ಕಾಪಾಡೋದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಈ ಸಂದರ್ಭದಲ್ಲಿ ಖ್ಯಾತ ವಿದ್ವಾಂಸಕ ಪ್ರೊಫೆಸರ್ ಡಾ. ಅಪ್ಪಣ್ಣ ಹಂಜೆಯವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

12ನೇ ಶತಮಾನದಲ್ಲಿ ಚಾಮುಂಡರಾಯನ ಶ್ರವಣ ಬೆಳಗೊಳದಲ್ಲಿ ಗೊಮ್ಮಟೇಶ್ವರನ ಏಕಶಿಲಾ ವಿಗ್ರಹವನ್ನು ಕೆತ್ತಿಸಿದ ಈ ಪ್ರಯೋಗ 10ನೇ ಶತಮಾನದಲ್ಲಿಯೇ ಮುಳುಗುಂದದಲ್ಲಿ ನಡೆದಿದೆ ಎನ್ನುವ ಇತಿಹಾಸವಿದೆ. ಇಂತಹ ಇತಿಹಾಸ ಪ್ರಸಿದ್ಧ ಜೈನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಸಂರಕ್ಷಿಸುವ ಜವಾಬ್ದಾರಿಯನ್ನು ಊರಿನ ಹಿರಿಯರು ಪರೋಪಕಾರಿ ಯಾದ ನಾಗರಾಜ ದೇಶಪಾಂಡೆಯಂತಹ ದಾನ ಧರ್ಮಿಗಳು ಮಾಡವ ಸಮಾಜಸೇವೆಯ ಮೂಲಕ ಎಲ್ಲರನ್ನೂ ಜಾಗೃತ ಉಳಿಸಬೇಕಾಗಿದೆ ಎಂದು ವಿನಂತಿಸಿದರು.

ಸುಹಾಸ್ತಿ ಯುವ ಜೈನ್ ಮಿಲನ್ ಸದಸ್ಯ ಕಲಾವಿದ ಚಿತ್ತ ಜಿನೇಂದ್ರ ಮಾತಾಡುತ್ತಾ ಸತತ ಐದು ವರ್ಷಗಳಿಂದ ಮಿಲನ ಸದಸ್ಯರ ಪ್ರೋತ್ಸಾಹದ ಮುಖಾಂತರ ರಾಜ್ಯದಲ್ಲಿ ಪಾಳುಬಿದ್ದಿರುವ ಜೈನ ಬಸದಿಗಳನ್ನು ಸ್ವಚ್ಛತೆ ಮಾಡುವ ಮುಖಾಂತರ ಊರಿನವರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಂತೋಷಪಟ್ಟರು.

ತಂತ್ರಜ್ಞಾನದ ಈ ಯುಗದಲ್ಲಿ ಪಾಲಕ ಪೋಷಕರಾದ ನಾವು ಮಕ್ಕಳು ಮತ್ತು ಯುವಜನತೆಯನ್ನು ಧರ್ಮದ ಪ್ರಭಾವನೆ ಪ್ರಚಾರ ಮತ್ತು ಸಂರಕ್ಷಣಾ ದೃಷ್ಟಿಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖಾಂತರ ಜಾಗೃತಗೊಳಿಸಿ ಒಳ್ಳೆ ನಾಗರಿಕರನ್ನಾಗಿ ಸಮಾಜಕ್ಕೆ ನೀಡುವಲ್ಲಿ ತಂದೆ-ತಾಯಿ ಗಳ ಪಾತ್ರ ಬಹಳ ಮುಖ್ಯವಾಗಿದ್ದು, ನಾವು ಜೈನರು ಶಾಂತಿ ಸ್ವಭಾವದವರು ಮತ್ತು ಅಹಿಂಸಾ ಪ್ರಿಯರು ಕ್ಷಮಾಗುಣ ದವರು ಎಂದು ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ಬಿಟ್ಟು ಕೆಲವೊಂದು ಸಂದರ್ಭದಲ್ಲಿ ಧರ್ಮಕ್ಕೆ ಅವಮಾನವಾದಾಗ ಸಹಿಸಲು ಅಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಬಿಎಸ್ಎಂ ಜೈನ್ ಅಸೋಸಿಯೇಷನ್ ರಿ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮಾಳ ಹಷೇರ್ಂದ್ರ ಜೈನ್ ಅಭಿಪ್ರಾಯಪಟ್ಟರು.

ಕರವೇ ಉಪಾಧ್ಯಕ್ಷ ದಾವುದಾ ಜಮಾಲಸಾಬನವರ ಮಾತಾಡಿ ಕಲೆ ವಾಸ್ತುಶಿಲ್ಪ ಹೊಂದಿರುವ ಜೈನ ಬಸದಿ ಜೀರ್ಣೋದ್ಧಾರ ಮಾಡುವುದರಿಂದ ಪಟ್ಟಣದ ಅಭಿವೃದ್ಧಿಗೆ ಪೂರಕ ಶಕ್ತಿಯಾಗಿರುತ್ತದೆ. ಆದುದರಿಂದ ಜೈನ ಬಸದಿ ಯ ಸಂರಕ್ಷಣೆಗೆ ನಾವೆಲ್ಲ ಸಮಾಜದವರು ಕಂಕಣಬದ್ಧರಾಗಿ ಅಭಿವೃದ್ಧಿಗೋಸ್ಕರ ಜೊತೆಯಲ್ಲಿ ಇರುತ್ತೇವೆ ಎಂದು ನುಡಿದರು.

ಪರೋಪಕಾರಿ ಸಮಾಜ ಸೇವಕ ಹಾಗೂ ಕೊಡುಗೈದಾನಿ ಕಾರ್ಯಕ್ರಮದ ಅಧ್ಯಕ್ಷರು ಶ್ರೀ ನಾಗರಾಜ್ ದೇಶಪಾಂಡೆಯವರು ಮಾತಾಡುತ್ತಾ ತಮ್ಮ ತಂದೆ ತಾಯಿಯ ದಾನ ಗುಣಗಳನ್ನು ಸ್ಮರಿಸಿಕೊಳ್ಳುತ್ತಾ ಊರಿನ ಪರವೂರಿನ ಎಲ್ಲಾ ಬಂಧುಗಳು ನೆರವಿನೊಂದಿಗೆ ಮುಂದಿನ ದಿನಗಳಲ್ಲಿ ಪೂಜ್ಯ ಧರ್ಮಸ್ಥಳÀದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕರ ಪ್ರೋತ್ಸಾಹದ ಆಶೀರ್ವಾದಗಳೊಂದಿಗೆ ಈ ಪುರಾತನ ಜೈನ ಬಸದಿಯನ್ನು ನವೀನ ಕರುಣ ಗೊಳಿಸಿ ಕರ್ನಾಟಕದಲ್ಲಿ ಇತಿಹಾಸ ಪ್ರಸಿದ್ಧ ಜೈನ ತೀರ್ಥ ಕ್ಷೇತ್ರವಾಗಿ ಪ್ರಸಿದ್ದಿ ಹೊಂದಲಿದೆ ಎಂದರು.

ಮುಳುಗುಂದ ರಕ್ಷಣಾ ವೇದಿಕೆ, ಉನ್ನತಿ ಮಹಿಳಾ ಸಂಘ, ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು, ಮುಳುಗುಂದ ನಗರದ ಯುವಕರು ಮಹಿಳೆಯರು ಹಾಗೂ ಲಕ್ಷ್ಮೇಶ್ವರ, ಅಣ್ಣಿಗೇರಿ, ಕಳಸಾಪುರ, ಗದಗ, ಹರ್ತಿ, ಬನ್ನಿಕೊಪ್ಪ ಮತ್ತು ಇನ್ನಿತರ ಸ್ಥಳೀಯ ಪರವೂರ ಜನ ಸಂಘ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಆಗಮಿಸಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಭಗವಂತಪ್ಪ ಪುಟ್ಟಣ್ಣನವರ, ವೈಭವ್ ಗೋಗಿ, ಸನ್ಮತಿ ಗೋಗಿ, ಪದ್ಮರಾಜ ನಾವಳ್ಳಿ, ಹರ್ಷ ದೇಶಪಾಂಡೆ, ಮಂಗಳ ನೀಲಗುಂದ, ಧರ್ಮಸ್ಥಳ ಸುರೇಂದ್ರ ಹೆಗಡೆಯವರ ಆಪ್ತ ಕಾರ್ಯದರ್ಶಿ ಶ್ರೀ ಮಹಾವೀರ್ ಹೊಸೂರ, ಕರವೇ ಅಧ್ಯಕ್ಷ ಎಂ ಆರ್ ತಡೆದಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕ ರಾಜು ಲಕ್ಕುಂಡಿ, ದಕ್ಷಿಣ ಭಾರತ ತೀರ್ಥಕ್ಷೇತ್ರ ಕಮಿಟಿಯ ಸದಸ್ಯರು ಸ್ಪೂರ್ತಿ ಜೈನ್ ಹಾಗೂ ಬೆಂಗಳೂರಿನ ಅಧ್ಯಕ್ಷ ಪುಟ್ಟಸ್ವಾಮಿ ಜೈನ್, ಸಂತೋಷ್ ಜೈನ್, ವಜ್ರ ಕುಮಾರ್ ಜೈನ್, ಚೇತನ್ ಜೈನ್, ಸಂದೇಶ್ ಜೈನ್ ಹಾಗೂ ಸ್ಥಳೀಯರಾದ ಶ್ರೀ ಮಹಾವೀರ ಜೈನ್ ವೀರೇಂದ್ರ ಜೈನ್ ಮತ್ತು ಭರತೇಶ್ ಜೈನ್ ಹಾಗೂ ಎಲ್ಲ ಗೌರವಾನ್ವಿತ ಸ್ವಯಂಸೇವಕರು ಭಾಗಿಯಾಗಿದ್ದರು.