Sunday, January 19, 2025
ರಾಜಕೀಯ

ಕಾಂಗ್ರೆಸ್ ಪಕ್ಷದಿಂದ 15 ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರ್ಪಡೆ ; ಸುಳ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ – ಕಹಳೆ ನ್ಯೂಸ್

ಸುಳ್ಯ: ಕಾಂಗ್ರೆಸ್ ದುರಾಡಳಿತ ಬೇಸತ್ತು ಬಿಜೆಪಿ ತತ್ತ್ವ ಸಿದ್ಧಾಂತ ಒಪ್ಪಿ ಅಮರಮುಡ್ನೂರು ಕೂಟೇಲು ಪರಿಸರದ ಕಾಂಗ್ರೆಸ್ ಮುಖಂಡರು ಹಾಗೂ 15 ಕ್ಕೂ ಮಿಕ್ಕಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಗುರುವಾರ ಸೇರ್ಪಡೆಗೊಂಡರು. ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಬಿಜೆಪಿ ಧ್ವಜ ನೀಡಿ ಸ್ವಾಗತಿಸಿದರು.

ಕಳೆದ ಕೆಲವು ಸಮಯಗಳಿಂದ ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ದಬ್ಬಾಳಿಕೆಯ ರಾಜಕಾರಣವನ್ನು ಸಹಿಸದೆ ಬಿಜೆಪಿ ಪಕ್ಷದ ತತ್ತ್ವ ಸಿದ್ದಾಂತಗಳನ್ನು ಒಪ್ಪಿ ಜಾಲ್ಸೂರು ಬಿಜೆಪಿ ಮಹಾಶಕ್ತಿಕೇಂದ್ರದ ಮೂಲಕವಾಗಿ ತಮಿಳು ಸಮುದಾಯದ ಮುಖಂಡ ಸಹಿತ ಹಲವಾರು ಮಂದಿ ಬಿಜೆಪಿ ಸೇರ್ಪಡೆಗೊಂಡರು. ರೋಯಿಲ್ ಕುಮಾರ್, ಪುವೇಂದ್ರನ್, ಶಶಿಕುಮಾರ್, ಚಂದ್ರಪಾಲ್, ಅರುಣ್‍ಕುಮಾರ್, ಕರುಣಾಕರ, ಶಿಲಂಬರಶನ್, ಮಣಿಕಂಠ, ಅರಣಚಲಂ, ಶಿವಕುಮಾರ್ , ಅರ್ಜುನ್, ಶಶಿಕುಮಾರ್, ಮಣಿರಾಜೇಶ್, ಶರವಣ ಹಾಗೂ ಇತರರು ಬಿಜೆಪಿ ಸೇರಿದ ಪ್ರಮುಖರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ , ಚುನಾವಣಾ ಉಸ್ತುವಾರಿ ಎ ವಿ ತೀರ್ಥರಾಮ, ರಾಧಾಕೃಷ್ಣ ಬೊಳ್ಳೂರು, ತಮಿಳು ಮುಖಂಡ ಸುಪ್ಪಯ್ಯ , ಉದಯ ಆಚಾರ್, ಪುಷ್ಪಾವತಿ ಬಾಳಿಲ, ಹರೀಶ್ ಕಂಜಿಪಿಲಿ, ಮಾಧ್ಯಮ ಪ್ರಮುಖ್ ಮುಳಿಯ ಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಬಿಜೆಪಿ ಮತ್ತೊಮ್ಮೆ ಸುಳ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.