Sunday, January 19, 2025
ಗೋಕರ್ಣ

ವಾಙ್ಮಯ ಅಭಿಮಾನ ಅವರ ಮೇರು ವ್ಯಕ್ತಿತ್ವಕ್ಕೆ ಭೂಷಣವಾಗಿತ್ತು ; ಶ್ರೀರಾಘವೇಶ್ವರಭಾರತೀ ಸ್ವಾಮೀಜಿ-ಕಹಳೆ ನ್ಯೂಸ್

ಗೋಕರ್ಣ : ಪ್ರೊ.ಜಿ.ವಿ.ಯವರ ಧರ್ಮಾಭಿಮಾನ, ವಾಙ್ಮಯ ಅಭಿಮಾನ ಅವರ ಮೇರು ವ್ಯಕ್ತಿತ್ವಕ್ಕೆ ಭೂಷಣವಾಗಿತ್ತು. ಹಿರಿಯ ಮುತ್ಸದ್ಧಿ, ಸರಸ್ವತಿಪುತ್ರರತ್ನರನ್ನು ಕಳೆದುಕೊಂಡ ಸಾರಸ್ವತ ಲೋಕ ನಿಜವಾಗಿಯೂ ಬಡವಾಗಿದೆ ಎಂದು ಶ್ರೀರಾಮಚಂದ್ರಾಪುರದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.


ಶ್ರೀಮಠದ ಜತೆ ನಿಕಟ ಸಂಬಂಧ ಹೊಂದಿದ್ದ ಜಿವಿಯವರು ರಾಮಕಥೆಯನ್ನು ಸ್ವತಃ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ರಾಮಾಯಣದ ಮೌಲ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಲು ಶ್ರೀಮಠ ಆಯ್ಕೆ ಮಾಡಿಕೊಂಡ ರಾಮಕಥೆ, ಇತರ ಯಾವುದೇ ಸಂವಹನ ಮಾಧ್ಯಮಕ್ಕಿಂತಲೂ ಪರಿಣಾಮಕಾರಿ. ಮಕ್ಕಳನ್ನು- ಯುವಕರನ್ನು ಮತ್ತೆ ತ್ರೇತಾಯುಗಕ್ಕೆ ಕರೆದೊಯ್ಯುವ ಅಪೂರ್ವ ಪ್ರಯತ್ನ ಎಂದು ಜಿವಿ ಬಣ್ಣಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮಠ 2013ರ ರಾಮೋತ್ಸವ ಸಂದರ್ಭದಲ್ಲಿ ಪ್ರೊ.ಜಿವಿಯವರಿಗೆ ಪುರುಷೋತ್ತಮ ಪ್ರಶಸ್ತಿ ನೀಡಿ ಗೌರವಿಸಿತ್ತು. ಶ್ರೀಮಠದ ಗೋ ಅಭಿಯಾನವನ್ನು ಹತ್ತಿರದಿಂದ ವೀಕ್ಷಿಸುತ್ತಿದ್ದ ಅವರು, ಸನಾತನತೆ, ಸಂಸ್ಕøತಿಯನ್ನು ಕಾಪಿಡುವಲ್ಲಿ ಶ್ರೀಮಠದ ಕೊಡುಗೆ ಅಪಾರ ಎಂದು ಹೇಳುತ್ತಿದ್ದರು. ನೂರೆಂಟು ಸಂವತ್ಸರ ಕಂಡ ಜಿವಿಯವರ ಮುಂದೆ ಶ್ರೀಮಠದ ಶಿಷ್ಯರು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆಯನ್ನು ವಿವರಿಸಿದಾಗ ಅತೀವ ಸಂತಸ ವ್ಯಕ್ತಪಡಿಸಿ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ಸ್ವಾಮೀಜಿ ನೆನಪಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮಠದ ವತಿಯಿಂದ ಪ್ರತಿ ವರ್ಷ ಆಗಸ್ಟ್ 23ರಂದು ಅವರ ಜನ್ಮದಿನದ ಸಂದರ್ಭದಲ್ಲಿ ಆಶೀರ್ವಾದ ಕಳುಹಿಸಿಕೊಡುತ್ತಿದ್ದಾಗ, ಸ್ವತಃ ಶಂಕರಾಚಾರ್ಯರೇ ಬಂದಂತಾಯಿತು ಎಂದು ವಿನೀತರಾಗಿ ಶ್ರದ್ಧಾಭಕ್ತಿಯಿಂದ ಸ್ವೀಕರಿಸುತ್ತಿದ್ದರು. ಭಾರತೀ ಪ್ರಕಾಶನದ ಹಲವು ಕೃತಿಗಳನ್ನೂ ಬಹುವಾಗಿ ಮೆಚ್ಚಿಕೊಂಡು, ಶ್ರೀಮಠದ ಸಾಮಾಜಿಕ ಸೇವೆ ಅನನ್ಯ ಎಂದು ಭೇಟಿಯಾದಾಗಲೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ಮೆಲುಕು ಹಾಕಿಕೊಂಡಿದ್ದಾರೆ.