ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ, ಗ್ರಾಮೀಣ ಅಮಾಯಕರಿಂದ ಬಡ ಕೂಲಿ ಕಾರ್ಮಿಕರಿಂದ ಹಣ ವಸೂಲಿ ಮಾಡುತಿದ್ದಾರೆ.
ಇದು ಖಂಡನೀಯ ಎಂದು ನಿವೃತ್ತ ಆರೋಗ್ಯ ಇಲಾಖಾಧಿಕಾರಿ ಹಾಗೂ ಹಿರಿಯ ನಾಗರೀಕರಾದ ತೋಟನಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮಾಯಕರಿಂದ ಹಣ ವಸೂಲಿ ಮಾಡೋ ಬದಲಾಗಿ ಅವರೇ ಮಾಸ್ಕನ್ನು ಕಡಿಮೆ ದರದಲ್ಲಿ ನೀಡಲಿ. ಮತ್ತು ಕರೋನ ಕುರಿತು ಜಾಗೃತಿ ಮೂಡಿಸಬಹುದಾಗಿದೆ.
ಪೊಲೀಸರು ಪಟ್ಟಣ ಪಂಚಾಯ್ತಿಯವರು ಹಾಗೂ ಆರೋಗ್ಯ ಇಲಾಖೆಯವರು ಸಾರ್ವಕನಿಕರಿಗೆ ಉಚಿತ ಮಾಸ್ಕ್ ವಿತರಿಸಿ,ಅಗತ್ಯ ನಿಯಮಗಳ ಕುರಿತು ಜಾಗೃತಿ ಮೂಡಿಸಬಹುದಾಗಿದೆ.ಅದನ್ನು ಬಿಟ್ಟು ಗ್ರಾಮೀಣ ಭಾಗದ ಅಮಾಯಕ ಜನರು ತರಾತುರಿಯಲ್ಲಿ ಬಿಡಿಗಾಸಿನೊಂದಿಗೆ, ಪಟ್ಟಣಕ್ಕೆ ಬಂದು ಮಾಸ್ಕ ಧರಿಸದೇ ಇರೋ ಕಾರಣ ಅವರಿಂದ ನೂರಾರು ರೂ ದಂಡದ ರೂಪದಲ್ಲಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ.
ದಂಡದ ರೂಪದಲ್ಲಿ ವಸೂಲಿ ಮಾಡೋ ಹಣ ಸರ್ಕಾರ ತಲುಪದೇ ಸಾಕಷ್ಟು ಹಣ ಪೋಲಾಗುತ್ತಿದೆ ಎಂಬ ಆರೋಪಗಳೂ ಇವೆ, ನೆಪ ಮಾತ್ರಕ್ಕೆ ಯಾವೋದೋ ರಸೀದಿ ಹಾಕುತ್ತಾರೆಂದು ಹೇಳಲಾಗುತ್ತಿದೆ ಮೇಲಾಧಿಕಾರಿಗಳು ಗಮನಿಸಬೇಕಿದೆ. ದಂಡ ವಸೂಲಿಯಲ್ಲೂ ತಾರತಮ್ಯ ಇದೆಯಂತೆ ದಂಡ ವಸೂಲಿ ಮಾಡೋ ಪೊಲೀಸರೇ ಬಹುತೇಕವಾಗಿ ಮಾಸ್ಕ್ ಧರಿಸಿರಲ್ಲ, ಅವರಿಗೊಂದು ನ್ಯಾಯ ಪರರಿಗೊಂದು ನ್ಯಾಯನಾ.!? ಬೈಕ್ ಹಿಡಿದಾಗ ಕೆಲವರು ಮಾಸ್ಕ್ ಧರಿಸದವರನ್ನ ಹಾಗೆ ಬಿಡುತ್ತಾರೆ ಕೆಲವು ಹಳ್ಳಿಗರನ್ನೇ ಹೊಡೆದು ದಂಢ ಹಾಕುತ್ತಾರೆ ಇದ್ಯಾವ ಸೀಮೆ ನ್ಯಾಯ..!? ಎಂದು ತೋಟಪ್ಪನವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಸಾಕಷ್ಟು ಗ್ರಾಮೀಣರು ನೊಂದು ಕಣ್ಣೀರಿಟ್ಟಿದ್ದಾರೆ. ಪೊಲೀಸರಿಗೆ ರೈತರು ಕಾರ್ಮಿಕರು ಗ್ರಾಮೀಣರು ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣ ಪಂಚಾಯ್ತಿ ಹಾಗೂ ಪೊಲೀಸರು ಹಾಗೂ ಕೆಲ ಇಲಾಖೆಗಳು ದಂಡದ ನೆಪದಲ್ಲಿ,ಜನರಿಂದ ಹಣ ವಸೂಲಿ ಮಾಡೋದನ್ನ ಕೂಡಲೇ ನಿಲ್ಲಿಸಬೇಕಿದೆ,
ಬದಲಾಗಿ ಕನಿಷ್ಠ ದರದಲ್ಲಿ ಮಾಸ್ಕ್ ನೀಡಿ ಜಾಗೃತಿ ಮೂಡಿಸಲಿ ಎಂದು ತೋಟಪ್ಪನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ದಂಡ ವಸೂಲಿಯಲ್ಲಿ ಭಾರೀ ಲೋಪವಿದೆ ಎಂಬ ಆರೋಪಗಳಿದ್ದು, ಸರ್ಕಾರದ ದಂಡದ ನೆಪದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳಿವೆ ಎಂದ ಅವರು, ದಂಡ ವಸೂಲಿಯನ್ನ ಖಂಡಿಸಿದ್ದಾರೆ. ಈ ನೆಪದಲ್ಲಿ ಸಾರ್ವಜನಿಕರಿಂದ ಕೆಲೆವೆಡೆಗಳಲ್ಲಿ ಪೊಲೀಸರಿಂದ ಹಣ ವಸೂಲಿ ದಂಧೆ ನಡೆಸುತ್ತಿದ್ದಾರೆ ಎಂಬ ಎಂಬ ದೂರು ಇದೆ ಎಂದಿದ್ದಾರೆ.ಅವರು ಈ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗೆ ತಾವು ಪತ್ರ ಬರೆದಿರುವುದಾಗಿ ತೋಟಪ್ಪನವರು ತಿಳಿಸಿದ್ದಾರೆ.