Friday, September 20, 2024
ರಾಜಕೀಯ

Breaking News : ಬಂಟ್ವಾಳದಲ್ಲಿ ಸಾವಿರಕ್ಕೂ ಹೆಚ್ಚು ಸೀರೆ ವಶಪಡಿಸಿಕೊಂಡ ಚುನಾವಣಾಧಿಕಾರಿಗಳು ; ರೈ ಕೈವಾಡ ಸಾದ್ಯತೆ – ಕಹಳೆ ನ್ಯೂಸ್

ಬಂಟ್ವಾಳ, ಏ.19: ಇಲ್ಲಿನ ಬಿ.ಸಿ.ರೋಡಿನ ಪ್ರತಿಷ್ಠಿತ ಬ್ಯಾಂಕ್‌ವೊಂದಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ನಡೆಸಿ ಅಲ್ಲಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂ. ಮೌಲ್ಯದ ಸಾವಿರಾರು ಸೀರೆಗಳನ್ನು ವಶಪಡಿಸಿಕೊಂಡ ಘಟನೆ ಏ 19 ರ ಗುರುವಾರ ನಡೆದಿದೆ.

ಬ್ಯಾಂಕ್ ನಲ್ಲಿ ಅಕ್ರಮವಾಗಿ ಸೀರೆ ದಾಸ್ತಾನು ಮಾಡಿಕೊಂಡ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಗೋಣಿಚೀಲಗಳಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 1,222 ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಸುಮಾರು 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ವಶಪಡಿಸಿಕೋಡ ಸೀರೆಗಳು ಯಾರಿಗೆ ಸೇರಿದ್ದು ಎಂದು ಸ್ಪಶ್ಟವಾಗಿ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಹಾಲಿ ಸಚಿವ ರಮಾನಾಥ ರೈ ಕೈವಾಡ ಸಾದ್ಯೆತೆ ಎದ್ದು ಕಾಣುತ್ತಿದೆ.

ಆದರೆ ಬ್ಯಾಂಕ್ ಮೂಲಗಳ ಪ್ರಕಾರ ಈ ಸೀರೆಗಳನ್ನು ನವೋದಯ ಸ್ವಸಹಾಯ ಗುಂಪಿನ ಸದಸ್ಯರಿಗೆ ವಿತರಣೆಗಾಗಿ ತಂದಿರಿಸಲಾಗಿದ್ದು, ಚುನಾವಣೆ ಘೋಷಣೆಯಾದ ನಂತರ ನೀತಿ ಸಂಹಿತೆ ಕಾರಣಕ್ಕಾಗಿ ಸೀರೆಗಳನ್ನು ಸ್ವಸಹಾಯ ಗುಂಪಿನ ಸದಸ್ಯರಿಗೆ ವಿತರಣೆ ಮಾಡದೆ ಹಾಗೆಯೇ ಉಳಿಸಿಕೊಳ್ಳಲಾಗಿತ್ತು.
ಇನ್ನು ದಾಸ್ತಾನು ಸೀರೆಗಳನ್ನು ವಶಪಡಿಸಿಕೊಂಡಿರುವ ಚುನಾವಣಾ ಅಧಿಕಾರಿಗಳು, ಬಂಟ್ವಾಳ ನಗರ ಠಾಣೆ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸುತ್ತಿದ್ದಾರೆ