ಸನಾತನ ಸಂಸ್ಥೆ ವತಿಯಿಂದ ರಾಮನವಮಿ ನಿಮಿತ್ತ ಆನ್‍ಲೈನ್ ಮೂಲಕ ಶ್ರೀರಾಮ ನಾಮಜಪ ಯಜ್ಞ ಮತ್ತು ವಿಶೇಷ ಸತ್ಸಂಗದ ಆಯೋಜನೆ-ಕಹಳೆ ನ್ಯೂಸ್
ಶ್ರೀರಾಮನವಮಿಯ ದಿನ ಪೃಥ್ವಿಯ ಮೇಲೆ 1000ಕ್ಕೂ ಹೆಚ್ಚು ಪಟ್ಟು ಶ್ರೀರಾಮನ ತತ್ತ್ವವು ಕಾರ್ಯನಿರತವಾಗಿರುತ್ತದೆ, ಅದಕ್ಕಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ನಾಮಜಪ, ಶ್ರೀರಾಮರಕ್ಷಾಸ್ತೋತ್ರ ಮತ್ತು ಶ್ರೀರಾಮನ ಇತರ ಉಪಾಸನೆ ಮಾಡುವುದರಿಂದ ಹೆಚ್ಚು ಪ್ರಮಾಣದಲ್ಲಿ ಶ್ರೀರಾಮತತ್ತ್ವವನ್ನು ಗ್ರಹಣ ಮಾಡಲು ಸಹಾಯವಾಗುತ್ತದೆ ಮತ್ತು ಶ್ರೀ ರಾಮನ ರಕ್ಷಾ ಕವಚವು ನಿರ್ಮಾಣವಾಗುತ್ತದೆ.
ಸದ್ಯದ ಸಂಕಟ ಕಾಲವನ್ನು ಎದುರಿಸಲು, ಆಧ್ಯಾತ್ಮಿಕ ಪ್ರಗತಿಗಾಗಿ ಹಾಗೂ ರಾಮರಾಜ್ಯದ ನಿರ್ಮಾಣಕ್ಕಾಗಿ ರಾಜ್ಯಾದ್ಯಂತ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಆನ್‍ಲೈನ್ ಮೂಲಕ ನಡೆಯಲಿದ್ದು ಈ ಕೆಳಗಿನ ಫೇಸ್‍ಬುಕ್ ಮತ್ತು ಯೂಟ್ಯೂಬ್ ಚಾನೆಲ್‍ನಲ್ಲಿ ಪ್ರಸಾರವಾಗಲಿದೆ. ಎಪ್ರಿಲ್ 20 ರಂದು ಮಧ್ಯಾಹ್ನ 2 ರಿಂದ ಶ್ರೀರಾಮನವಮಿಯ ವಿಶೇಷ ಸತ್ಸಂಗ ಹಾಗೂ ಎಪ್ರಿಲ್ 21 ರಂದು ಮಧ್ಯಾಹ್ನ 12 ರಿಂದ ಶ್ರೀರಾಮ ನಾಮಜಪ ಯಜ್ಞ ನಡೆಯಲಿದೆ.
ಈ ಕಾರ್ಯಕ್ರಮವು Youtube.com/HJSKarnataka, Youtube.com/SSKarnataka ಈ ಯೂಟ್ಯೂಬ್ ಚಾನೆಲ್‍ಗಳ ಮೂಲಕ ಹಾಗೂ Facebook.com/HJSBengaluru ಈ ಫೇಸ್‍ಬುಕ್ ಪೇಜ್‍ನ ಮೂಲಕ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಸಮಸ್ತ ಹಿಂದೂ ಬಾಂಧವರು ತಪ್ಪದೇ ವೀಕ್ಷಿಸಬೇಕೆಂದು ಸನಾತನ ಸಂಸ್ಥೆ, ರಾಜ್ಯ ವಕ್ತಾರರು, ಶ್ರೀ. ವಿನೋದ ಕಾಮತ, ಅವರು ವಿನಂತಿಸಿಕೊಂಡಿದ್ದಾರೆ.