ಪುತ್ತೂರು : ಕೇಂದ್ರ ಸರಕಾರದ ಆದೇಶದಂತೆ ಎಪ್ರಿಲ್ 11 ರಿಂದ 14 ರ ತನಕ ನಡೆದ ಕೊರೊನಾ ವ್ಯಾಕ್ಸಿನ್ ಫೆಸ್ಟಿವಲ್ ಲಸಿಕಾ ಉತ್ಸವದಲ್ಲಿ ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸಕ್ರಿಯವಾಗಿ ಪಾಲ್ಗೊಂಡರು.
ಕೊರೊನಾ ವ್ಯಾಕ್ಸಿನ್ ಕುರಿತು ಸವಿವರವಾದ ಮಾಹಿತಿಯನ್ನು ಮನೆ ಮನೆಗೆ ತೆರಳಿ ಜನರಿಗೆ ನೀಡುವುದರೊಂದಿಗೆ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಿದರು.
ಮಂಗಳೂರು ವಿವಿಯ ಸೆಮಿಸ್ಟರ್ ಪರೀಕ್ಷಾ ತಯಾರಿಯ ಅವಧಿಯಲ್ಲಿಯೂ ಸೇವಾ ಮನೋಭಾವನೆಯಿಂದ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎನ್ನೆಸ್ಸೆಸ್ ಸ್ವಯಂ ಸೇವಕರನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅಭಿನಂದಿಸಿದರು.
ಈ ಕಾರ್ಯಕ್ರಮವು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಶಶಿಪ್ರಭಾ ಬಿ ಮತ್ತು ದಿನಕರ್ ಅಂಚನ್ ಮಾರ್ಗದರ್ಶನದಲ್ಲಿ ಜರಗಿತು.