Tuesday, January 21, 2025
ಹೆಚ್ಚಿನ ಸುದ್ದಿ

ಉರುವಾಲು ಮಸೀದಿ ಸಮೀಪದ ತಿರುವಿನಲ್ಲಿ ಎರಡು ದ್ವಿಚಕ್ರ ವಾಹನಗಳು ಪರಸ್ವರ ಡಿಕ್ಕಿ-ಕಹಳೆ ನ್ಯೂಸ್

ಉರುವಾಲು : ಉರುವಾಲು ಮಸೀದಿ ಸಮೀಪದ ತಿರುವಿನಲ್ಲಿ ಎಪ್ರಿಲ್ 19ರಂದು ರಾತ್ರಿ ಎರಡು ದ್ವಿಚಕ್ರ ವಾಹನಗಳು ಪರಸ್ವರ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಬೈಕ್ ಸವಾರನನ್ನು ಬಂದಾರು ಗ್ರಾಮದ ಶ್ರೀರಾಮ ನಗರ ನಿವಾಸಿ 30 ವರ್ಷದ ಶೀನಪ್ಪ ಕುಂಬಾರ ರವರ ಪುತ್ರ ರಾಜೇಶ್ ಕುಂಬಾರ ಎಂದು ತಿಳಿದುಬಂದಿದೆ. ಹಾಗೂ ಸಹಸವಾರ ಪುರಂದರ ಮತ್ತು ಇನ್ನೋರ್ವ ಬೈಕ್ ಸವಾರ ಶಾಫಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಪುತ್ತೂರಿನ ಆಸ್ವತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜೇಶ್ ಅವರು ತಮ್ಮ ಸಹಸವಾರ ಪುರಂದರರೊಂದಿಗೆ ಕುಪ್ಪೆಟ್ಟಿ ಕಡೆಯಿಂದ ಬಂದಾರು ಕಡೆಗೆ ತಮ್ಮ ಬೈಕ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಉರುವಾಲು ಮಸೀದಿ ಸಮೀಪ ಎದುರುಗಡೆಯಿಂದ ಬಂದ ಶಾಫಿಯವರ ದ್ವಿಚಕ್ರ ವಾಹನ ಪರಸ್ವರ ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ಡಿಕ್ಕಿ ಹೊಡೆದ ರಭಸಕ್ಕೆ ಮೂವರೂ ರಸ್ತೆಗೆಸೆಯಲ್ಲಟ್ಟು ಗಂಭೀರ ಗಾಯಗೊಂಡಿದ್ದಾರೆ.

ವಿಷಯ ತಿಳದ ಕೂಡಲೇ ಅವರನ್ನು ನೌಫಾಲ್ ಅವರ ಬಾಬಾ ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿನ ಆಸ್ವತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ವತ್ರೆಗೆ ತಲುಪುವಷ್ಟರಲ್ಲಿ ರಾಜೇಶ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಉಳಿದ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ರಾಜೇಶ್ ಅವರು ಕೂಲಿ ಕಾರ್ಮಿಕರಾಗಿದ್ದು, ತಂದೆ ಶೀನಪ್ಪ ಕುಂಬಾರ, ತಾಯಿ ಸುಶೀಲಾ, ಹಾಗೂ ಮೂವರು ಸಹೋದರಿಯರು ಮತ್ತು ಬಂಧುವರ್ಗದವರನ್ನು ಅಗಲಿದ್ದಾರೆ.