Sunday, November 24, 2024
ಹೆಚ್ಚಿನ ಸುದ್ದಿ

ಕೋರೋನಾ ಕಾಲದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಮರೆತರೆ?? ದೇಶದ ಜನರು…-ಕಹಳೆ ನ್ಯೂಸ್

ಲೇಖನ : ರಾಕೇಶ್ ಬಿರ್ತಿ

ಕೋರೋನಾ ಮೊದಲನೇಯ ಅಲೆಗಿಂತ …ಎಡರನೇಯ ಅಲೆಯ ಗಂಭೀರತೆಯನ್ನು ಜನರು ಅರ್ಥ ಮಾಡಿಕೊಂಡತಿಲ್ಲ….!!!

ಜಾಹೀರಾತು
ಜಾಹೀರಾತು
ಜಾಹೀರಾತು


ದೇಶದಲ್ಲಿ ದಿನಕ್ಕೆ ಲಕ್ಷದ ಗಡಿ ದಾಟಿ.. ದೀನೇ ದಿನೆ ಏರುತ್ತಿರುವ ಕೋರೋನಾ ಪೀಡಿತರ ಸಂಖ್ಯೆ, ಸಾವಿನ ಪ್ರಮಾಣದಲ್ಲೂ ಎರಡನೇ ಅಲೆಯಲ್ಲಿ ಭಾರೀ ಏರಿಕೆ… ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ, ದೇಶದಲ್ಲಿ ಲಸಿಕೆ ಕೊರತೆ, ಶವ ವಿಲೇವಾರಿಗೂ ಪರದಾಡುವ ಸ್ಥಿತಿ…..!

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲನೇ ಅಲೆಗಿಂತಲೂ ಈಗ ದೇಶದಲ್ಲಿ ನಿಜವಾಗಿಯೂ ಲಾಕ್ – ಡೌನ್ ಆಗಬೇಕಾದ ಸ್ಥಿತಿ ದೇಶದಲ್ಲಿ ಇದೆ….ಆದರೆ ಈಗಾಗಲೇ ಲಾಕ್ – ಡೌನ್ ಅಸ್ತ್ರವನ್ನು ಪ್ರಯೋಗಿಸಿರುವ ಸರಕಾರವು…ಇದರಿಂದ ಆದ ಕುಸಿದಿರುವ ವ್ಯಾಪಾರ, ವಹಿವಾಟು, ಆರ್ಥಿಕ ಸಂಕಷ್ಟಗಳನ್ನು ಮನಗಂಡು..ಲಾಕ್ – ಡೌನ್ ಮಾಡುವ ಸ್ಥಿತಿ ಇದ್ದರೂ… ಜನರಿಗೆ ಮತ್ತೊಂದು ರೀತಿಯಲ್ಲಿ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಲಾಕ್ – ಡೌನ್ ಮಾಡಲು ಹಿಂದೇಟು ಹಾಕುತ್ತಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಲಾಕ್ – ಡೌನ್ ಬದಲಾಗಿ ಕಠಿಣ ನಿಯಮಗಳನ್ನು ಜಾರಿಗೆ ತಂದರೂ…ಜನರು ಅದನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ…. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಎಲ್ಲವನ್ನೂ ಜನರು ಗಾಳಿಗೆ ತೂರಿದ್ದಾರೆ

ಜನರು ತಮ್ಮ ಜವಾಬ್ದಾರಿ ಮರೆತಾಗಲೇ ಸರಕಾರ ಲಾಕ್ – ಡೌನ್ ನಂತಹ ನಿರ್ಧಾರ ಮಾಡಬೇಕಾದ ಸ್ಥಿತಿ ಸರಕಾರಕ್ಕೆ ಬಂದೇ ಬರುತ್ತದೆ…ಇದಕ್ಕೆ ಅವಕಾಶವನ್ನು ಕೊಡದೇ..ಎಲ್ಲರ ಆರೋಗ್ಯಕ್ಕಾಗಿ ಜನರು ಸರಕಾರ ನೀಡಿರುವ ಕನಿಷ್ಠ ನಿಯಮಗಳನ್ನು ಸ್ವಯಂ ಪ್ರೇರಿತರಾಗಿ ಪಾಲಿಸಿ..ಸಾಮಾಜಿಕ ಜವಾಬ್ದಾರಿಯನ್ನು ಪಾಲಿಸಬೇಕು.