Sunday, November 24, 2024
ಪುತ್ತೂರು

ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ರಾಮನವಮಿ ಆಚರಣೆ -ಕಹಳೆ ನ್ಯೂಸ್

ಪುತ್ತೂರು : ಶ್ರೀರಾಮ ಹುಟ್ಟಿ ಯುಗ ಕಳೆದಿದೆ. ಈಗಲೂ ರಾಮನ ಜನ್ಮ ದಿನವನ್ನು ಆಚರಿಸುತ್ತೇವೆ ಎಂದರೆ ರಾಮನ ಶಕ್ತಿ ಎಷ್ಟು ಅಪಾರ ಎನ್ನುವುದು ಮನನವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮರಾಜ್ಯ ಎಂದರೆ ಕ್ಷಾಮಡಾಮರಗಳಿಲ್ಲದೆ, ರೋಗರುಜಿನ, ದುಃಖಗಳಿಲ್ಲದೆ ನಮ್ಮ ಮನಸ್ಸು ಆರಾಮವಾಗಿರುವ ರಾಜ್ಯ. ಚೈತ್ರ ಶುದ್ಧ ನವಮಿ ಶ್ರೀರಾಮನ ಜನ್ಮೋತ್ಸವ; ಸಕಲರಿಗೂ ರಾಮನವಮಿಯ ಶುಭಾಶಯ ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿ ರಾಮ ನವಮಿ ಆಚರಣೆಯ ಮುಖ್ಯ ಅತಿಥಿಯಾಗಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಅವರು ರಾಮನ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ರಾಮನ ಅನುಗ್ರಹ ನಿಮಗಿರಲಿ; ಹನುಮಂತನ ನಿಷ್ಠೆ ಇರಲಿ. ಜನನಿ, ಜನ್ಮಭೂಮಿಯನ್ನು ಎಂದೆಂದೂ ಗೌರವಿಸಿ ಪಿತೃವಾಕ್ಯ ಪರಿಪಾಲಕರಾಗಿ ಎಂದು ಹಿತನುಡಿದರು.

ಸಮಾರಂಭದ ಅಧ್ಯಕ್ಷ ಪೀಠವನ್ನಲಂಕರಿಸಿದ ಸಂಸ್ಥೆಯ ಪ್ರಾಚಾರ್ಯೆ ರಾಜಶ್ರೀ ಎಸ್ ನಟ್ಟೋಜ ಅವರು ನಗು-ನಗುತ್ತಾ ಬೇರೆಯವರಿಗೆ ನೋವನ್ನುಂಟು ಮಾಡದೆ, ಅಪಕಾರ ಮಾಡದೆ, ಸಾಧ್ಯವಾದಷ್ಟು ಉಪಕಾರ ಮಾಡಿ ಬದುಕಿ. ಮನುಷ್ಯನಿಗೆ ಆದರ್ಶ ಗುಣಗಳೇ ಭೂಷಣ. ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಶ್ರೀರಾಮನ ಅನುಗ್ರಹಕ್ಕೆ ಪಾತ್ರರಾಗಿ ಎಂದು ವಿದ್ಯಾರ್ಥಿಗಳನ್ನು ಹರಸಿದರು.

ರಾಮನವಮಿಯ ಪ್ರಯುಕ್ತ ಹಮ್ಮಿಕೊಂಡಂತಹ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಾ.ವಿನಾಯಕ ಭಟ್ಟ ಗಾಳಿಮನೆ ಇವರು ಬಹುಮಾನ ವಿತರಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಕು.ವಸುಂಧರ ಲಕ್ಷೀ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿಯರಾದ ರಚನಾ, ಅಧಿಶ್ರೀ, ಹಿಮಾ, ಶ್ರಾವ್ಯ, ದಿಶಾ ಪ್ರಾರ್ಥಿಸಿದರು. ಕು.ಪ್ರೇಕ್ಷಾ ಸ್ವಾಗತಿಸಿ ಉಪಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯರು ವಂದಿಸಿದರು. ವಿದ್ಯಾರ್ಥಿನಿ ಕು.ದಿಶಾ ನಿರೂಪಿಸಿದರು. ಶ್ರೀ ಮುರಳಿ ಮೋಹನ ಸಹಕರಿಸಿದರು.