Recent Posts

Sunday, January 19, 2025
ರಾಜಕೀಯ

ಸಿ.ಎಂ ಅಭ್ಯರ್ಥಿ ಬಿ.ಎಸ್.ವೈ. ಬಳಿ ಇರುವ ಆಸ್ತಿ ಎಷ್ಟು ಗೊತ್ತಾ…? – ಕಹಳೆ ನ್ಯೂಸ್

ಶಿವಮೊಗ್ಗ: ಶಿಕಾರಿಪುರ ವಿಧಾನಸಭೆ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಬಿ.ಜೆ.ಪಿ. ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಎಸ್.ವೈ. 7.23 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2 ಕೆ.ಜಿ. 698 ಗ್ರಾಂ ಚಿನ್ನ, 84 ಕೆ.ಜಿ. ಬೆಳ್ಳಿ ವಸ್ತುಗಳಿದ್ದು, ಒಟ್ಟು 1,09,46,400 ರೂ. ಮೌಲ್ಯದ ಚಿನ್ನ, ಬೆಳ್ಳಿ ಹೊಂದಿದ್ದಾರೆ. ಅವರಿಗೆ 12.33 ಲಕ್ಷ ರೂ. ಆದಾಯವಿದೆ. 1 ಲಕ್ಷ ರೂ. ನಗದನ್ನು ಹೊಂದಿರುವ ಯಡಿಯೂರಪ್ಪ 71,30,040 ರೂ. ಮೌಲ್ಯದ ಚರಾಸ್ತಿ, 6,52,29,147 ರೂ. ಮೌಲ್ಯದ ಸ್ಥಿರಾಸ್ತಿ, 2 ಟೊಯೊಟಾ ಫಾರ್ಚೂನರ್ ಕಾರು, 1 ದ್ವಿಚಕ್ರ ವಾಹನ ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು