ವೇಗವಾಗಿ ಹರಡುತ್ತಿರುವ ಕೊರೋನಾದ ಚೈನ್ ಲಿಂಕ್ ಗೆ ಕಡಿವಾಣ ಹಾಕುವುದೇ ಪ್ರಧಾನಿಗೆ ಇರುವ ಮುಖ್ಯವಾದ ಟಾಸ್ಕ್!– ಕಹಳೆ ನ್ಯೂಸ್
ಲೇಖನ : ರಾಕೇಶ್ ಬಿರ್ತಿ
ದೇಶದಲ್ಲಿ ಕೋರೋನಾ ಹಡುತ್ತಿರುವ ವೇಗಕ್ಕೆ ಕಡಿವಾಣ ಹಾಕಿ ಹತೋಟಿಗೆ ತರಲೇ ಬೇಕಾಗಿದೆ. ಇದಕ್ಕಾಗಿ ಯಾವುದೇ ನಿಯಮವನ್ನು ಜಾರಿಗೆ ತರಲು ಸರಕಾವು ಬದ್ಧವಾಗಿರಬೇಕು.
ಕೊರೋನಾ ಹರಡುತ್ತಿರುವ ವೇಗಕ್ಕೆ.. ದೇಶದಲ್ಲಿ ಲಸಿಕೆ, ಹಾಸಿಗೆ, ಶವ ವಿಲೇವಾರಿ ಗೂ, ವೆಂಟಿಲೇಟರ್ ಗೂ, ಮತ್ತು ಸರಿಯಾದ ಚಿಕಿತ್ಸೆಗೂ ಪರದಾಡುವ ಪರಿಸ್ಥಿತಿ ಉಂಟಾಗಿದ್ದು, ದೇಶದಲ್ಲಿ ಕೋರೋನಾ ಪೀಡಿತರ ಸಂಖ್ಯೆ ಇನ್ನಷ್ಟು ಉಲ್ಬಣಗೊಂಡರೆ.
ಅದನ್ನು ಎದುರಿಸಲು ಸಮಸ್ಯೆಗಳು ಮತ್ತಷ್ಟು ಸರಕಾರಕ್ಕೆ ಎದುರಾಗಬಹುದು.. ಇದಕ್ಕಾಗಿ ಮೊದಲು ಗೌರವಾನ್ವಿತ ಪ್ರಧಾನ ಮಂತ್ರಿಗಳು ಕೊರೋನಾ ಹರಡುವ ವೇಗಕ್ಕೆ ಕಡಿವಾಣ ಹಾಕುವ ಕುರಿತು ನಿಯಮಗಳನ್ನು ಜಾರಿಗೆ ತರಬೇಕಾದ ಅನಿವಾರ್ಯತೆ ದೇಶದಲ್ಲಿ ಇದೆ!