ಬಂಟ್ವಾಳದಲ್ಲಿ ಬಿಜೆಪಿ ಸುನಾಮಿ ; ರಾಜೇಶ್ ನಾಯಕ್ ನಾಮಪತ್ರ ಸಲ್ಲಿಕೆ ವೇಳೆ ಜನಜಾತ್ರೆ, ರಮಾನಾಥ ರೈ ಸೋಲಿಗೆ ಮುನ್ನುಡಿ – ಕಹಳೆ ನ್ಯೂಸ್
ಮಂಗಳೂರು: ರಾಜ್ಯ ರಾಜಕೀಯದ ಅತೀ ಕುತೂಹಲದ ಕ್ಷೇತ್ರ ಈ ಬಾರಿ ಮಂಗಳೂರಿನ ಬಂಟ್ವಾಳ ಕ್ಷೇತ್ರ
ಹೌದು ಸದ್ಯ ಮಂಗಳೂರಿನ ಬಂಟ್ವಾಳ ಕ್ಷೇತ್ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಾಟ್ ಸ್ಪಾಟ್ ಆಗಿದೆ. ಕಳೆದ 25 ವರ್ಷಗಳಿಂದ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೂ ಅಭಿವೃದ್ಧಿ ಎಂಬುದು ಕನಸಾಗಿ ಉಳಿದಿದೆ.. ಇದರ ನಡುವೆ ಧರ್ಮದ ರಾಜಕೀಯ ಜೋರಾಗಿ ನಡೆಸುತ್ತ ಬಂದಿರುವ ಸದ್ಯ ಕ್ಷೇತ್ರದ ಉಸ್ತುವಾರಿ ಸಚಿವರು ಆಗಿರುವ ರಮಾನಾಥ ರೈ ಅವರ ವಿರುದ್ಧ ಈ ಬಾರಿ ಇಡೀ ಬಂಟ್ವಾಳ ತಾಲೂಕು ಸೆಟೆದು ನಿಂತಿದೆ.
ಸಾಮರಸ್ಯದ ಬದುಕು ಸಾಗಿಸುತ್ತಾ ಇದ್ದ ಬಂಟ್ವಾಳ ಕ್ಷೇತ್ರದಲ್ಲಿ ಧರ್ಮದ ವಿಷ ಬೀಜ ಬಿತ್ತಿ ಅಶಾಂತಿ ಹುಟ್ಟು ಹಾಕಿ ಹತ್ಯಾ ರಾಜಕೀಯಕ್ಕೆ ನಾಂದಿ ಹಾಡಿದ ರೈ ವಿರುದ್ಧ ಈಗ ಬಂಟ್ವಾಳ ಜನತೆ ಆಕ್ರೋಶಗೊಂಡಿದ್ದು, ಈ ಬಾರಿ ಬದಲಾವಣೆ ಮಾಡಲು ಮುಂದಾಗಿದ್ದಾರೆ.
ಬಂಟ್ವಾಳ ಕ್ಷೇತ್ರದಲ್ಲಿ ರೈ ಅವರ ಅಧಿಕಾರ ದುರುಪಯೋಗ ಹಾಗೂ ಹತ್ಯಾ ರಾಜಕೀಯ ಮುಂದಿಟ್ಟು ಬಿಜೆಪಿ ಚುನಾವಣಾ ಅಖಾಡಕ್ಕೆ ಧುಮುಕಿದ್ದು ಇದರಲ್ಲಿ ಆರಂಭಿಕ ಜಯ ಸಾಧಿಸಿದೆ. ಈ ಬಾರಿ ಬಂಟ್ವಾಳ ಜನತೆ ಬದಲಾವಣೆ ಬಯಸಲು ಪ್ರಮುಖ ಕಾರಣ ಎಂದರೆ ಬಂಟ್ವಾಳದ ಬಿಜೆಪಿ ಅಭ್ಯರ್ಥಿ. ಈ ಬಾರಿ ಬಂಟ್ವಾಳ ಕ್ಷೇತ್ರಕ್ಕೆ ಬಿಜೆಪಿ ಅಳೆದು ತೂಗಿ ಒಬ್ಬ ಯುವ ನೇತಾರ ಸಮಾಜ ಸೇವಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಎಂಬ ಯುವಕನ ಹೆಗಲಿಗೆ ಬಂಟ್ವಾಳ ಕ್ಷೇತ್ರದ ಚುಕ್ಕಾಣಿ ಹಿಡಿಯುವ ಅವಕಾಶ ಕೊಟ್ಟಿದ್ದು ಬಂಟ್ವಾಳದ ನಾಗರಿಕರಲ್ಲಿ ಹೊಸ ಹುರುಪು ಬಂದಿದ್ದು ಅದಕ್ಕೆ ಈ ಒಂದು ವೀಡಿಯೋ ತುಣುಕು ಉದಾಹರಣೆ.
ರಾಜೇಶ್ ನಾಯ್ಕ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಮೇಲೆ ಬಂಟ್ವಾಳದಲ್ಲಿ ಚುನಾವಣಾ ಕಾವು ಏರಿದ್ದು, ನಿನ್ನೆ ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಸಾಗಿದ ರಾಜೇಶ್ ನಾಯ್ಕ್ ಅವರ ಹಿಂದೆ ಹತ್ತು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಶುಭ ಹಾರೈಕೆ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಶಪಥ ಮಾಡಿದ್ದು ಈಗ ಕ್ಷೇತ್ರದ ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿಸಿದಂತೂ ಸುಳ್ಳಲ್ಲ.
https://youtu.be/jGPsoUBEJBs