Monday, November 25, 2024
ಹೆಚ್ಚಿನ ಸುದ್ದಿ

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಮಕ್ಕಳು ; ಎಸ್ಡಿಎಮ್ಸಿ ವತಿಯಿಂದ ಸನ್ಮಾನ-ಕಹಳೆ ನ್ಯೂಸ್

ವಿಜಯನಗರ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ರಾಜೀವಗಾಂಧಿನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಎಸ್ಡಿಎಮ್ಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರತ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು , ಸರ್ಕಾರಿ ಶಾಲೆಯಲ್ಲಿಯೇ ನೊಂದಣಿ ಮಾಡಿಸಬೇಕೆಂದು, ನಿಯಮ ಜಾರಿಗೆ ಬರಲಿ ಎಂಬ ಎಸ್ಡಿಎಮ್ಸಿ ಯವರ ಮಹತ್ತರವಾದ ಸಂಕಲ್ಪವನ್ನು. ಕಾರ್ಯರೂಪಕ್ಕೆ ತಂದಿರುವ ಅದೇ ಶಾಲಾ ಶಿಕ್ಷಕರಾದ ಶೆಕ್ಷಾವಲಿ ಶಿಕ್ಷಕರು ಈಡೇರಿಸಿದ್ದಾರೆ.

ಇವರ ಮಗನನ್ನು ತಾವು ಕೆಲಸ ಮಾಡುತ್ತಿರುವ ಇದೇ ಶಾಲೆಯಲ್ಲಿಯೇ ವಿದ್ಯಾಬ್ಯಾಸ ಮಾಡಿಸುತಿದ್ದಾರೆ. ಮತ್ತು ಅವರ ಮತ್ನಿ ಕೂಡ ಎಸ್ಢಿ ಎಮ್ಸಿ ಅಧ್ಯಕ್ಷರಾಗಿದ್ದಾರೆ. ಅದಕ್ಕಾಗಿ ಎಸ್ಡಿ ಎಮ್ಸಿ ವತಿಯಿಂದ ಜಿಲ್ಲಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ನೇತೃತ್ವದಲ್ಲಿ, ಈ ಆದರ್ಶ ದಂಪತಿಗಳನ್ನ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ಸಂಯೋಜಕರಾದ ಶಿವಾನಂದ ಹಾಗೂ ಇಂದ್ರಮ್ಮ ರವರು, ಸದಸ್ಯರಿಗೆ ಸೂಕ್ತ ಮಾಹಿತಿಗಳೊಂದಿಗೆ ತರಬೇತಿ ನೀಡಿದರು. ಗುನ್ನಳ್ಳಿ ರಾಘವೇಂದ್ರ ಮಾತನಾಡಿದರು. ಎಸ್ಡಿಎಮ್ಸಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರು ಮತ್ತು ಪಪಂ ಸದಸ್ಯ ಕಾಲಚಟ್ಟಿ ಈಶಪ್ಪ, ಮುಖ್ಯ ಶಿಕ್ಷಕ ದಿವಾಕರ. ಬಸಪ್ಪ ವೇದಿಕೆಯಲ್ಲಿದ್ದರು. ಪಟ್ಟಣದ ಪ್ರಮಖರು ಭಾಗಿಯಾಗಿದ್ದರು.