ಮಂಗಳೂರು : ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಎಪ್ರಿಲ್ 21 ರಂದು ಅನ್ ಲೈನ್ ಮೂಲಕ ಶ್ರೀ ರಾಮ ನವಮಿ ಯನ್ನು ವಿಶೇಷವಾಗಿ ಆಚರಿಸಲಾಯಿತು.
ಮೂಡುಬಿದಿರೆ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಪಾವನ ಸಾನಿಧ್ಯ ವನ್ನು ವಹಿಸಿ ಆಶೀರ್ವಚನ ನೀಡಿದ್ದರು.
ಇಸ್ಕಾನ್ ಆರ್ಯ ಸಮಾಜ ರಸ್ತೆ ಮಂಗಳೂರು ಇದರ ರಾಧವಲ್ಲಭಾ ದಾಸ್, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕಹಳೆ ನ್ಯೂಸ್ ಚಾನೆಲ್ ನ ಮುಖ್ಯಸ್ಥರಾದ ಶಾಮ ಸುದರ್ಶನ ಭಟ್ ಪುತ್ತೂರು, ಯುವ ಪ್ರತಿಭೆ ಭಾವನ ಆರ್ ಗೌಡ ಶಿವಮೊಗ್ಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶ್ರೀ ರಾಮನ ಬಗ್ಗೆ ಉತ್ತಮ ವಿಚಾರಗಳನ್ನು ತಿಳಿಸಿದ್ದರು.
ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾರ್ವರಿ ಹುಬ್ಬಳ್ಳಿ , ಶ್ರೀ ರಕ್ಷಾ ಉಪಾಧ್ಯಾಯ ಹಾಸನ, ಶ್ರೀಮನ್ಮ ಬಳ್ಳಾಲ್ ಪದ್ಮುಂಜ, ಮನುಸ್ವಿ ಮಂಗಳೂರು, ತನುಸ್ವಿ ಮಂಗಳೂರು ಅವರಿಂದ ಭಕ್ತಿ ಗೀತಾ ಗಾಯನ ನಡೆಯಿತು.
ಝಿ ಕನ್ನಡ ವಾಹಿನಿಯ ಕನ್ನಡದ ಕಣ್ಮಣಿ ಕಾರ್ಯಕ್ರಮದ ವಿಜೇತೆ ಸಂಹಿತಾ ಜಿ. ಪಿ ಉಡುಪಿ ನಿರೂಪಿಸಿದರು.
ನಿರಂಜನ್ ಜೈನ್ ಕುದ್ಯಾಡಿ, ಜಿತ್ತಾ ಜಿನೇಂದ್ರ ಎಂ.ಎಂ ಬೆಂಗಳೂರು , ವಜ್ರ ಕುಮಾರ್ ಜೈನ್ ಬೆಂಗಳೂರು ಸಹಕರಿಸಿದರು.