ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಬಕಾರಿ ದಳ ಅಧಿಕಾರಿಗಳು ; ಆರೋಪಿ ಪರಾರಿ-ಕಹಳೆ ನ್ಯೂಸ್

ಸುಳ್ಯ : ಕೇನ್ಯ ಗ್ರಾಮದ ಕೆಮ್ಮಟೆ ಎಂಬಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದ ವೇಳೆ ಅಬಕಾರಿ ದಳ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.
ದಾಳಿ ನಡೆಸಿದ ವೇಳೆ 10 ಬಾಟಲಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಗೇರು ಹಣ್ಣಿನಿಂದ ತಯಾರಿಸಿದ 10 ಲೀ. ಸರಾಯಿ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಆರೋಪಿ ಕೆಮ್ಮಟೆ ಸುಂದರ ಗೌಡ ಎಂಬವರು ಪರಾರಿಯಾಗಿದ್ದಾರೆ. ಮತ್ತು ಅಬಕಾರಿ ದಳದ ನಿರೀಕ್ಷಕ ಸಿದ್ದಪ್ಪ ಮೇಟಿ, ಮತ್ತು ಸಿಬ್ಬಂದಿಗಳಾದ ಮಲ್ಲಣ್ಣ ಗೌಡ, ರಘನಾಥ ಬಜಂತ್ರಿ, ಅಶೋಕ್ ಹಾಗೂ ಶರಣಪ್ಪ ಕಾರ್ಯಚರಣೆ ನಡೆಸಿದ್ದರು.