Friday, November 22, 2024
ಸುದ್ದಿ

ಮಂಗಳೂರು : ಕೊರೊನಾ ವರದಿಯಲ್ಲಿ ತಾಂತ್ರಿಕ ಸಮಸ್ಯೆ ; ದುಬೈ ಪ್ರಯಾಣಿಕರ ಪರದಾಟ-ಕಹಳೆ ನ್ಯೂಸ್

ಮಂಗಳೂರು : ಕೊರೊನಾ ಪರೀಕ್ಷಾ ವರದಿಯಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈಗೆ ಪ್ರಯಾಣಿಸಬೇಕಿದ್ದ ಕೆಲವು ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.


ದುಬೈಗೆ ತೆರಳುವವರು 48 ಗಂಟೆ ಮೀರದ ಕೊರೊನಾ ಟೆಸ್ಟ್ ಪ್ರಮಾಣಪತ್ರ ಹೊಂದಿರಬೇಕು. ಕೊರೊನಾ ಟೆಸ್ಟ್ ಮಾಡಿರುವ ಆಸ್ಪತ್ರೆಯ ಕ್ಯುಆರ್ ಕೋಡ್ ಹೊಂದಿರಬೇಕು. ಆದರೆ, ಮಂಗಳೂರಿನ ಕೆಲ ಆಸ್ಪತ್ರೆಗಳಲ್ಲಿ ಕ್ಯುಆರ್ ಕೋಡ್ ಸಮಸ್ಯೆಯಿಂದಾಗಿ ಈ ತೊಂದರೆ ಎದುರಾಗಿದ್ದು, ಕೆಲವು ಪ್ರಯಾಣವನ್ನೇ ಮೊಟಕುಗೊಳಿಸಬೇಕಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದೇಶಕ್ಕೆ ಪ್ರಯಾಣಿಸುವವರ ಅದರಲ್ಲೂ ಮುಖ್ಯವಾಗಿ ದುಬೈಗೆ ಪ್ರಯಾಣಿಸುವವರು ಹೊಂದಿರಬೇಕಾದ ಕೊರೊನಾ ಟೆಸ್ಟ್ ಪ್ರಮಾಣಪತ್ರದ ಅವಧಿಯನ್ನು 72 ಗಂಟೆಯಿಂದ 48 ಗಂಟೆಗೆ ಇಳಿಸಲಾಗಿದೆ. ಭಾರತದಿಂದ ದುಬೈಗೆ ತೆರಳುವ ಪ್ರಯಾಣಿಕರ ಕೊರೊನಾ ಟೆಸ್ಟ್ ಪ್ರಮಾಣಪತ್ರದ ಕುರಿತಂತೆ ದುಬೈ ಸರ್ಕಾರ ಹೊಸ ನಿಯಮಾವಳಿಯನ್ನು ಜಾರಿ ಮಾಡಿದ್ದು, ಅದರ ಮಾಹಿತಿಯ ಪ್ರಕಾರ ಮಂಗಳೂರಿನ ಕೆಲ ಆಸ್ಪತ್ರೆಯವರಿಗೆ ಈ ವಿಚಾರ ತಡವಾಗಿ ತಿಳಿದ ಕಾರಣ ಈ ಸಮಸ್ಯೆ ಎದುರಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು