Friday, November 22, 2024
ಸಿನಿಮಾ

ಶಾರೂಕ್ ಖಾನ್ ನನ್ನ ಜೀವನ ಹಾಳು ಮಾಡಿದ್ದಾರೆ ; ಮುಂಬೈ ಯುವತಿ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ಮುಂಬೈನ ಯುವತಿಯೊಬ್ಬಳು ತನ್ನ ಇನ್‍ಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದು, ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಯಾಗುತ್ತಿದೆ.

ಮುಂಬೈ ಮೂಲದ ಯುವತಿಯೊಬ್ಬಳ ‘ಹ್ಯುಮನ್ಸ್ ಆಫ್ ಬಾಂಬೆ’ ಎಂಬ ಪೇಜ್‍ನಲ್ಲಿ ಆಕೆಯ ಪ್ರೇಮಕಥೆಯನ್ನು ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ ಶಾರೂಕ್ ಖಾನ್ ನನ್ನ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾರೂಕ್ ಖಾನ್ ನನ್ನ ಜೀವನವನ್ನು ಹಾಳು ಮಾಡಿದ್ದಾರೆ. ನಾನು ಚಿಕ್ಕವಳಿದ್ದಾಗಿಂದಲೂ ಒಂದು ಒಳ್ಳೆಯ ವ್ಯಕ್ತಿಯಿಂದ ಅದ್ಭುತ ಲವ್ ಪ್ರಪೋಸಲ್ ಪಡೆಯುವ ಕನಸು ಕಂಡಿದ್ದೆ. ನಮ್ಮ ಬ್ಯಾಕ್‍ಗ್ರೌಂಡ್‍ನಲ್ಲಿ ವಯಲಿನ್ ನುಡಿಯುತ್ತಿರಬೇಕು. ಆಗ ನಿಧಾನವಾಗಿ ಆತ ನನ್ನ ಹತ್ತಿರ ಬರುವಾಗ ನನ್ನ ಕೂದಲು ಗಾಳಿಯಲ್ಲಿ ಹಾರಾಡುತ್ತಿರಬೇಕು. ಆಗ ಆತ ನನ್ನ ಮುಂದೆ ಮಂಡಿಯೂರಿ, ನನ್ನ ಬೆರಳಿಗೆ ಉಂಗುರ ತೊಡಿಸಬೇಕು ಎಂಬ ಕನಸನ್ನು ಕಂಡಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ.

View this post on Instagram

“Shahrukh Khan ruined my life! Since I was a little girl, I always dreamed of having the ‘perfect proposal’ from the perfect man. Violins would start playing in the background, he would walk up to me slowly, while the wind blew in my hair, fall to his knees and hand me the ring. But that never happened. In fact, we found ourselves in the middle of this mess where I was trying to convince my Bengali parents to let me marry a Punjabi Baniya! We’d been dating for 3 years, but the majority of that time was spent on bringing our families together. At one point in our relationship, we were sure that we were going to get married –so he never even tried to ‘surprise’ me with a proposal. Amidst all this drama of a big, fat Indian wedding, I realised– I never had my filmy moment! So, on his birthday, I decided to take the matter into my own hands. I planned a surprise party at the restaurant where we had our first date, and as soon as he walked in– I asked the DJ to play “Marry Me” by Bruno Mars and fell to my knees when he walked in. I said ‘Ashish Aggrawal– I want to spend the rest of my life laughing, crying and fighting with you– will you marry me?’ He looked at me, smirked, pulled me in for a hug and whispered – ‘let’s hope our kids aren’t as filmy!’ And just like that, I created the moment I’d been waiting for..why do women have to wait for the guy to propose? It’s a new day, new age– if you like him, then maybe you should put a ring on it!”

A post shared by Humans of Bombay (@officialhumansofbombay) on

ನಾವು ನಮ್ಮ ಕುಟುಂಬದವರ ಮಧ್ಯೆ ಸಿಲುಕಿಗೊಂಡಿದ್ದವು. ನಾನು ನನ್ನ ಬೆಂಗಾಲಿ ಪೋಷಕರಿಗೆ ಪಂಜಾಬಿ ಯುವಕನ ಜೊತೆ ಮದುವೆಯಾಗಲೂ ಒಪ್ಪಿಸುತ್ತಿದ್ದೆ. ನಾವಿಬ್ಬರು 3 ವರ್ಷದಿಂದ ಡೇಟಿಂಗ್ ನಡಿಸುತ್ತಿದ್ದೆವು, ಅದರಲ್ಲಿ ನಮ್ಮ ಕುಟುಂಬದವರನ್ನು ಒಪ್ಪಿಸುವುದರಲ್ಲೇ ಸ್ವಲ್ಪ ಕಾಲ ಕಳೆಯಿತು. ಆದರೆ ನಮ್ಮ ಪ್ರೀತಿಯನ್ನು ನೋಡಿದ್ದಾಗ ನಮ್ಮ ಮದುವೆಯಾಗುತ್ತದೆ ಎಂಬ ನಂಬಿಕೆ ಇತ್ತು. ಹಾಗಾಗಿ ಆತ ನನಗೆ ಯಾವುದೇ ‘ಸರ್ಪ್ರೈಸ್’ ಪ್ರಪೋಸ್ ಮಾಡಿಲ್ಲ ಎಂದು ಯುವತಿ ಹೇಳಿದ್ದಾಳೆ.

ಈ ಭಾರತದ ದೊಡ್ಡ ಸಂಪ್ರದಾಯದ ಮದುವೆಯಲ್ಲಿ ನನ್ನ ಫಿಲ್ಮಿ ಕನಸು ನನಸಾಗಿಲ್ಲ ಎಂಬುದು ತಿಳಿಯಿತು. ಆಗ ನಾನು ಆತನ ಹುಟ್ಟುಹಬ್ಬಕ್ಕೆ ನಾನೇ ಸರ್ಪ್ರೈಸ್ ನೀಡಲು ನಿರ್ಧರಿಸಿದೆ. ಆಗ ನಾನು ಒಂದು ರೆಸ್ಟೊರೆಂಟ್‍ನಲ್ಲಿ ಆತನಿಗೆ ಸರ್ಪ್ರೈಸ್ ಪಾರ್ಟಿ ನೀಡಿದೆ. ಅಲ್ಲಿಗೆ ಹೋಗುತ್ತಿದ್ದ ಹಾಗೆ ನಮ್ಮ ಮೊದಲ ಡೇಟ್ ನಡೀತು. ಆಗ ನಾನು ಡಿಜೆ ‘ಮ್ಯಾರಿ ಮೀ’ ಹಾಡನ್ನು ಹಾಕಲು ಹೇಳಿದೆ. ನಂತರ ಆತ ಒಳಗೆ ಬರುತ್ತಿದ್ದ ಹಾಗೇ ನಾನೇ ಮಂಡಿಯೂರಿದೆ ಎಂದು ಯುವತಿ ಪೋಸ್ಟ್ ನಲ್ಲಿ ತಿಳಿಸಿದ್ದಾಳೆ.

ಆತನ ಮುಂದೆ ಮಂಡಿಯೂರಿ ಆಶೀಶ್ ಅಗರ್‍ವಾಲ್ ನಾನು ನನ್ನ ಮುಂದಿನ ಜೀವನವನ್ನು ನಿನ್ನ ಜೊತೆ ನಗುತ್ತಾ, ಅಳುತ್ತಾ ಹಾಗೂ ಜಗಳವಾಡುತ್ತಾ ಬದುಕಲು ಇಷ್ಟಪಡುತ್ತೇನೆ. ನನ್ನನ್ನು ಮದುವೆಯಾಗುತ್ತೀಯ? ಎಂದು ಕೇಳಿದೆ. ಆಗ ಆತ ನನ್ನನ್ನು ನೋಡಿ ಮೇಲೆತ್ತಿ ಅಪ್ಪಿಕೊಂಡು, ನಮ್ಮ ಮಕ್ಕಳು ಫಿಲ್ಮಿ ರೀತಿ ಇರಲ್ಲ ಎಂದು ಆಶಿಸುತ್ತೇನೆ ಎಂದು ಹೇಳಿದನು. ನಾನು ಯಾವುದ್ದಕ್ಕೆ ಕಾಯುತ್ತಿದ್ದನೋ ಅದನ್ನು ನಾನೇ ಮಾಡಿದೆ. ಆಗ ನನಗೆ ತಿಳಿಯಿತು ಯುವತಿಯರು ಯಾಕೆ ಹುಡುಗರ ಪ್ರಪ್ರೋಸಲ್‍ಗಾಗಿ ಕಾಯುತ್ತಾರೆ? ಇದು ಹೊಸ ದಿನ, ಹೊಸ ಯುಗ. ನಿಮಗೆ ಆ ಯುವಕ ಇಷ್ಟವಾದರೆ, ಆತನ ಬೆರಳಿಗೆ ಉಂಗುರ ಹಾಕಿ ಎಂದು ಬರೆದು ಆಕೆ ಪೋಸ್ಟ್ ಮಾಡಿದ್ದಾಳೆ.