Recent Posts

Monday, April 7, 2025
ಕಡಬ

ಕಡಬ :ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸ್ ರಿಂದ ಧಾಳಿ.ಓರ್ವ ಬಂಧನ-ಕಹಳೆ ನ್ಯೂಸ್

ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗು ತಂಡದಿಂದ ಧಾಳಿ,‍ ಆರೋಪಿ ಇಲಿಯಾಸ್ ಎಂಬಾತನನ್ನು ಬಂಧನ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಯಿಲ ಗ್ರಾಮದ ಬಡ್ಡಮ್ಮೆ ಎಂಬಲ್ಲಿ ಮರಿಯಮ್ಮ ಎಂಬವರ ಮನೆಯ ಹಿಂಬದಿಯಲ್ಲಿ ಮನೆಯ ಅಂಗಳದಲ್ಲಿ ಉಸ್ಮಾನ್ ಎಂಬವರ ಮಗ ಇಲಿಯಾಸ್ ಎಂಬ ವ್ಯಕ್ತಿ ಅಕ್ರಮವಾಗಿ ದನದ ಹಾಗು ದನದ ಕರುವನ್ನು ಕೊಂದು ಮಾಂಸ ಮಾಡುತ್ತಿರುವ ಖಚಿತ ಮಾಹಿತಿ ತಿಳಿದ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗು ಸಿಬಂಧಿಗಳು ಇಂದು ಬೆಳಿಗ್ಗೆ ಕಾರ್ಯಾಚರಣೆ ಮಾಡಿದ ಸಂದರ್ಭದಲ್ಲಿ ಅಂಗಳದಲ್ಲಿ ಮಾಂಸದ ರಾಶಿಯೇ ಪತ್ತೆಯಾಗಿದೆ,
ಮೇಲ್ನೋಟಕ್ಕೆ ದನದ ಹಾಗು ಕರುವಿನ ಮಾಂಸ ಸುಮಾರು 50ಕೆಜಿ ಯಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.
ಜೊತೆಗೆ ಮಾಂಸ ಮಾಡಲು ರೆಡಿ ಮಾಡಿದ್ದ ಎರಡು ಜೀವಂತ ಕರುಗಳನ್ನು ರಕ್ಷಿಸಲಾಗಿದೆ ಎಂದು ಮಾದ್ಯಮಕ್ಕೆ ಮಾಹಿತಿ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ