Recent Posts

Sunday, January 19, 2025
ಸುದ್ದಿ

ಪ್ರಧಾನಿ ನರೇಂದ್ರ ಮೋದಿ `ಮನ್ ಕೀ ಬಾತ್’ ಮುಖ್ಯಾಂಶಗಳು- ಕಹಳೆ ನ್ಯೂಸ್

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ 1 ನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಹೀಗಾಗಿ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

76 ನೇ ಆವೃತ್ತಿಯ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೊರೊನಾ ಸೋಂಕು ಧೈರ್ಯದ ಪರೀಕ್ಷೆ ಮಾಡುತ್ತಿದೆ. ಕೊರನಾ ವೈರಸ್ ವಿರುದ್ಧ ಹೋರಾಟ ನಡೆಯುತ್ತಿದೆ. ಜನರು ತಮ್ಮವರನ್ನು ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ 1 ನೇ ಅಲೆಯನ್ನು ನಿಭಾಯಿಸದ್ದೇವೆ, ಹೀಗಾಗಿ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ದೇಶದಲ್ಲಿ ಕೊರೊನಾ 2 ಅಲೇ ಹೆಚ್ಚಾಗಿದ್ದು, ಬೆಚ್ಚಿ ಬೀಳಿಸುವಂತೆ ಮಾಡಿದೆ. ಕೊರೊನಾ ಲಸಿಕೆ ಕುರಿತಂತೆ ಊಹಾಪೋಹಗಳನ್ನು ನಂಬಬೇಡಿ, ವಿಶ್ವಾಸಾರ್ಹ ಸುದ್ದಿಗಳನ್ನು ಮಾತ್ರ ನಂಬಿ. ಎಲ್ಲರಿಗೂ ಲಸಿಕೆ ಮಹತ್ವದ ಬಗ್ಗೆ ತಿಳಿಯುತ್ತಿದೆ. ಉಚಿತ ಲಸಿಕೆ ಕಾರ್ಯಕ್ರಮ ಜಾರಿಯಲ್ಲಿರಲಿದ್ದು, ರಾಜ್ಯಗಳು ಲಸಿಕೆ ಸೌಲಭ್ಯ ಜನರಿಗೆ ತಲುಪಿಸಲಿ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರದ ಉಚಿತ ಲಸಿಕೆ ಯೋಜನೆ ಮುಂದುವರಿಯಲಿದೆ. ಮೇ. 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತೆ. ಲಸಿಕೆಯ ಮಹತ್ವದ ತಜ್ಞರ ಸಲಹೆಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಪರಿಸ್ಥಿತಿಯಲ್ಲಿ, ಅನೇಕ ವೈದ್ಯರು ರೋಗಿಗಳಿಗೆ ಆನ್ ಲೈನ್ ಸಮಾಲೋಚನೆಗಳನ್ನು ನೀಡಲು ತಂತ್ರಜ್ಞಾನವನ್ನು ಬಳಸುತ್ತಿರುವುದು ಪ್ರಶಂಸನೀಯ. ದೇಶವು ಎರಡನೇ ಅಲೆಯಿಂದ ಕೊಚ್ಚಿಹೋಗಿರುವ ಸಮಯದಲ್ಲಿ, ಈ ಕಷ್ಟದ ಸಮಯಗಳನ್ನು ಎದುರಿಸಲು ಸಕಾರಾತ್ಮಕ ಮನೋಭಾವವು ಬಹಳ ಮುಖ್ಯವಾಗಿದೆ. ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಸಹ ಪ್ರಸ್ತುತ ಕೋವಿಡ್-19 ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ, ಅವರು ಸಾಂಕ್ರಾಮಿಕದೊಂದಿಗೆ ಹಲವಾರು ರೀತಿಯ ಅನುಭವಗಳನ್ನು ಹೊಂದಿದ್ದಾರೆ ಎಂದರು.

ದೇಶದ ಕಾರ್ಪೊರೇಟ್ ವಲಯವು ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕುವ ಮೂಲಕ ಲಸಿಕೆ ಚಾಲನೆಯಲ್ಲಿ ಭಾಗವಹಿಸಬಹುದು. ಭಾರತ ಸರ್ಕಾರದ ಉಚಿತ ಲಸಿಕೆ ಕಾರ್ಯಕ್ರಮ ವು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ. ಈ ಉಚಿತ ಲಸಿಕೆ ಕಾರ್ಯಕ್ರಮದ ಪ್ರಯೋಜನಗಳು ಸಾಧ್ಯವಾದಷ್ಟು ಜನರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾನು ರಾಜ್ಯಗಳನ್ನು ವಿನಂತಿಸುತ್ತೇನೆಎಂದು ಹೇಳಿದ್ದಾರೆ.

ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಮುಂದುವರಿಸಲು ಭಾರತ ಸರ್ಕಾರ ಸಮರ್ಪಿತವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಕೋವಿಡ್ 19 ವಿರುದ್ಧದ ಈ ಯುದ್ಧದಲ್ಲಿ ಆಂಬ್ಯುಲೆನ್ಸ್ ಚಾಲಕರ ದೊಡ್ಡ ಕೊಡುಗೆ ಇದೆ. ಕೋವಿಡ್ 19 ವಿರುದ್ಧದ ಈ ಯುದ್ಧದಲ್ಲಿ ಆಂಬ್ಯುಲೆನ್ಸ್ ಚಾಲಕರ ದೊಡ್ಡ ಕೊಡುಗೆ ಯಾಗಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.