Recent Posts

Sunday, January 19, 2025
ಸುದ್ದಿ

ವೀಕೆಂಡ್ ಕಫ್ರ್ಯೂನಿಂದ ಸ್ತಬ್ಧವಾಗಿದ್ದ ಮಂಗಳೂರಿನಲ್ಲಿ ಮತ್ತೆ ಆರಂಭವಾದ ಕಾರ್ಯ ಚಟುವಟಿಕೆ-ಕಹಳೆ ನ್ಯೂಸ್

ಮಂಗಳೂರು: ಎರಡು ದಿನಗಳ ವೀಕೆಂಡ್ ಕಫ್ರ್ಯೂನಿಂದ ಸ್ತಬ್ಧವಾಗಿದ್ದ ಮಂಗಳೂರಿನಲ್ಲಿ ಇಂದು ಮತ್ತೆ ಅಗತ್ಯ ಸೇವೆಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭಗೊಂಡಿದೆ. ರಸ್ತೆಗಳಲ್ಲಿ ಖಾಸಗಿ ಬಸ್ ಸಂಚಾರ ಸೇರಿದಂತೆ ವಾಹನ ಸಂಚಾರ ಆರಂಭಗೊಂಡಿದ್ದು, ರಾತ್ರಿ ಕಫ್ರ್ಯೂ ಆರಂಭಗೊಳ್ಳುವವರೆಗೆ ವಾಹನ ಸಂಚಾರಕ್ಕೆ ಅವಕಾಶ ಇರಲಿದೆ. ಸರಕಾರದ ಆದೇಶದಂತೆ ಮೇ 4ರವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಅಂಗಡಿ, ಮಾಲ್, ಮಳಿಗೆಗಳು ತೆರೆಯಲು ಅವಕಾಶ ಇರುವುದಿಲ್ಲ. ಉಳಿದಂತೆ ದಿನಸಿ, ತರಕಾರಿ,ಹಾಲು, ಔಷಧ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಅಂಗಡಿಗಳಿಗೆ ಅವಕಾಶವಿದೆ. ವೀಕೆಂಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಎರಡು ದಿನ ಬಹುತೇಕ ಸ್ತಬ್ಧವಾಗಿದ್ದ ನಗರದಲ್ಲಿ ಇಂದು ಮತ್ತೆ ವಾಹನ ಸಂಚಾರ ಚುರುಕುಗೊಂಡಿವೆ.

ಜಾಹೀರಾತು

ಜಾಹೀರಾತು
ಜಾಹೀರಾತು