ಉಪ್ಪಿನಂಗಡಿ: ವಾರಂತ್ಯ ಕಪ್ರ‍್ಯೂ ದಿನವಾದ ಶನಿವಾರ ಮತ್ತು ಭಾನುವಾರದಂದು ಪುತ್ತೂರು – ಬಿ.ಸಿ.ರೋಡ್- ಹಾಸನ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಲ್ಪಡುವ 34 ನೇ ನೆಕ್ಕಿಲಾಡಿಯಲ್ಲಿ ನಾಕಾಬಂಧಿ ಹಾಕಿದ್ದ ಪೊಲೀಸರು ಎಲ್ಲಾ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದರು. ರಸ್ತೆಯಲ್ಲಿ ಸಂಚರಿಸುತ್ತಿದ್ದ, ವಾಹನ ಸವಾರರಿಗೆ ಲಾಠಿಯೇಟಿನ ರುಚಿ ನೀಡದೆ, ಅವರಿಗೆ ಹಿತನುಡಿಗಳನ್ನು ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಾರಂತ್ಯ ಕರ್ಪ್ಯೂವನ್ನು ಉಲ್ಲಂಘಿಸಿ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುವ ಮಂದಿಗೆ ಲಾಠಿಯೇಟು ನೀಡುವ ಅವಕಾಶ ಪೊಲೀಸರಿಗೆ ಇದ್ದರೂ, ಅದನ್ನು ಮಾಡದೆ ಜನರ ಪ್ರಾಣ ರಕ್ಷಣೆಗಾಗಿ ಸರಕಾರ ತಂದ ನಿಯಮವನ್ನು ಪಾಲಿಸಿದ ಉಪ್ಪಿನಂಗಡಿ ಪೋಲಿಸರು “ ದಯವಿಟ್ಟು ಅನಗತ್ಯ ಬೀದಿಗಿಳಿಬೇಡಿ ನಮಗೆ ನಿಮ್ಮನ್ನು ದಂಡಿಸಲು ಅವಕಾಶ ಮಾಡಿಕೊಡಬೇಡಿ” ಎಂದು ವಿನಂತಿಸಿಕೊಳ್ಳುವ ಮೂಲಕ ಹಿತನುಡಿಯಿಂದ ಸಮಾಜದ ಸ್ಪಂದನವನ್ನು ಬಯಸುತ್ತಿದ್ದಾರೆ.