Recent Posts

Sunday, January 19, 2025
ಬೆಳ್ತಂಗಡಿ

ಉಪ್ಪಿನಂಗಡಿ ನೆಕ್ಕಿಲಾಡಿಯ ವೃದ್ಧ ಮಹಿಳೆಯ ಕೊರೋನಾದಿಂದ ಸಾವು – ಕಹಳೆ ನ್ಯೂಸ್

ಉಪ್ಪಿನಂಗಡಿ : ತಾಲೂಕಿನಲ್ಲಿ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದವರೋರ್ವರಿಗೆ ಕೊರೋನಾ ದೃಢಪಟ್ಟಿದ್ದು, ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.


೩೪ ನೆಕ್ಕಿಲಾಡಿ ಗ್ರಾಮದ ಹಳೆಯೂರು ನಿವಾಸಿ ೬೭ರ ವೃದ್ಧೆ ಮೃತ ಮಹಿಳೆ. ಅವರಿಗೆ ಶನಿವಾರ ಉಬ್ಬಸ ಹಾಗೂ ಕಫ ಕಾಣಿಸಿಕೊಂಡಿದ್ದು, ಅವರನ್ನು ಮನೆಯವರು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಮೃತರ ಮನೆಗೆ ೩೪ ನೆಕ್ಕಿಲಾಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ಸಿಬ್ಬಂದಿ, ಪೊಲೀಸ್ ಹಾಗೂ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷರು ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಮೃತರಿಗೆ ಕೋವಿಡ್- ೧೯ ದೃಢಪಟ್ಟಿರುವುದರಿಂದ ಅವರ ಮೃತದೇಹವನ್ನು ಕೋವಿಡ್ ನಿಯಾಮಳಿಯಂತೆ ದಫನ ಮಾಡಲು ಸೂಚಿಸಿದರು. ಅದರಂತೆ ಮೃತದೇಹದ ದಫನ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಬ್ಬಸ ರೋಗವಿತ್ತು: ಈ ಬಗ್ಗೆ ಲೋಕಲ್ ಖಾಸಗೀ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ ಅವರ ಪುತ್ರ, ನನ್ನ ತಾಯಿಗೆ ಕಳೆದ ಆರು ವರ್ಷದಿಂದ ಉಬ್ಬಸ ರೋಗವಿತ್ತು. ಅದಕ್ಕೆ ಅವರು ಸ್ಥಳೀಯ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಅವರಿಗೆ ಉಬ್ಬಸ ಹಾಗೂ ಕಫದ ಸಮಸ್ಯೆ ಜಾಸ್ತಿಯಾಗಿದ್ದು, ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಮಧ್ಯಾಹ್ನ ಎರಡು ಗಂಟೆಯಷ್ಟು ಹೊತ್ತಿಗೆ ದಾಖಲಿಸಿದೆವು. ಆ ಸಂದರ್ಭ ಅಲ್ಲಿನ ವೈದ್ಯರು, ಇವರನ್ನು ನಾಲ್ಕೈದು ದಿನ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಬೇಕು. ಮತ್ತೆ ಸರಿ ಹೋಗುತ್ತಾರೆ ಎಂದಿದ್ದರು. ಅದರಂತೆ ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ರಾತ್ರಿ ೯ರ ಸುಮಾರಿಗೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಬೇಕೆಂದು ವೈದ್ಯರು ತಿಳಿಸಿದ್ದು, ಅದರಂತೆ ಕೋವಿಡ್ ಪರೀಕ್ಷೆ ನಡೆದಾಗ ಅದರಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು. ಬಳಿಕವೂ ಅವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಭಾನುವಾರ ಬೆಳಗ್ಗೆ ಅವರು ಮೃತರಾದರೆಂದು ವೈದ್ಯರು ತಿಳಿಸಿದರು. ಅವರಿಗೆ ಕೋವಿಡ್ ದೃಢಪಟ್ಟಿದ್ದರಿಂದ ಅದರ ನಿಯಾಮಾವಳಿಯಂತೆ ಅವರ ಅಂತಿಮ ಕಾರ್ಯ ನಡೆಸಿದೆವು. ನನ್ನ ತಾಯಿ ಮದ್ದಿಗೆ ಆಸ್ಪತ್ರೆಗೆ ಹೋಗಿದ್ದು ಬಿಟ್ಟರೆ ಬೇರೆಲ್ಲೂ ಹೋದವರಲ್ಲ. ಮನೆಯಲ್ಲೇ ಇರುತ್ತಿದ್ದರು. ಅವರಿಗೆ ಜ್ವರ ಸೇರಿದಂತೆ ಬೇರೆ ಯಾವ ಲಕ್ಷಣವೂ ಇರಲಿಲ್ಲ ಎಂದಿದ್ದಾರೆ.
ಮೃತರು ಪತಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ ಕೃಪೆ : ಅಂತರ್ಜಾಲ