Sunday, January 19, 2025
ಸುದ್ದಿ

ಇಲಾಖೆ ವಾಹನದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ಮೆರೆದ ಮಂಗಳೂರು ಪೊಲೀಸರು – ಕಹಳೆ ನ್ಯೂಸ್

ಮಂಗಳೂರು, ಏ.26 : ಹೆರಿಗೆಗೆಂದು ಆಸ್ಪತ್ರೆಗೆ ಹೋಗುವ ಸಂದರ್ಭ ಆರ್ಕುಳ ಪೊಲೀಸ್ ಚೆಕ್ ಪೋಸ್ಟ್‌‌ನಲ್ಲಿ ತನ್ನ ಕಾರು ಕೆಟ್ಟುಹೋಗಿ ಪರದಾಡುತ್ತಿರುವ ಮಹಿಳೆಯೊಬ್ಬರನ್ನು ಪೊಲೀಸ್ ಇಲಾಖೆ ವಾಹನದಲ್ಲಿ ಆಸ್ಪತ್ರೆಗೆ ತಲುಪಿಸಿ ಎಎಸ್ಐ ಹರೀಶ್ ಮತ್ತು ವಿಜಯ್‌ಕುಮಾರ್ ವಿ. ಎಂಬವರು ಮಾನವೀಯತೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯು ಹೆರಿಗೆಗೆಂದು ವಿಟ್ಲದಿಂದ ಮಂಗಳೂರಿಗೆ ಹೋಗುತ್ತಿದ್ದ ವೇಳೆ ಆರ್ಕುಳ ಪೊಲೀಸ್ ಚೆಕ್ ಪೋಸ್ಟ್ ಬಳಿ ಅವರ ಕಾರು ಕೆಟ್ಟು ಹೋಗಿದ್ದು, ಈ ವೇಳೆ ಸ್ಥಳಕ್ಕೆ ಧಾವಿಸಿದ ಎಎಸ್ಐ ಹರೀಶ್ ಮತ್ತು ವಿಜಯ್‌ಕುಮಾರ್ ವಿ. ಅವರು ತಮ್ಮ ಇಲಾಖೆ ವಾಹನದಲ್ಲಿಯೇ ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಇನ್ನು ಇವರ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹರೀಶ್ ಅವರು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಎಎಸ್ಐ ಮತ್ತು ವಿಜಯ್ ಕುಮಾರ್ ಅವರು ಪಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು